ಮಕ್ಕಳಿಗೆ ತಿಳಿಯಬೇಕಿದೆ ಗದ್ದೆಯ ಔಷಧೀಯ ಗುಣ: ವೀರಕಂಭ ಗ್ರಾ.ಪಂ. ಉಪಾಧ್ಯಕ್ಷ ಜನಾರ್ದನ ಪೂಜಾರಿ ಅನಿಸಿಕೆ

New Project (22)
Published on

ಬಂಟ್ವಾಳ: ಮನುಷ್ಯನು ತಾಂತ್ರಿಕತೆಗೆ ತನ್ನನ್ನು ಬಳಸಿಕೊಂಡಾಗ ಹಿಂದಿನ ತಲೆಮಾರಿನ ನಂಬಿಕೆ, ಸಂಪ್ರದಾಯವನ್ನು ಮರೆಯುತ್ತಿದ್ದಾನೆ. ಇಂದು ಕೃಷಿ ಗದ್ದೆಗಳು ಕಣ್ಮರೆಯಾಗುತ್ತಿವೆ. ಸಾಂಪ್ರದಾಯಿಕ ವ್ಯವಸಾಯ ಮರೆಯಾಗುತ್ತಿದೆ. ಇಂದಿನ ಮಕ್ಕಳಿಗೆ ಗದ್ದೆಯ ಔಷಧಿಯ ಗುಣಗಳು ತಿಳಿಯಬೇಕಾಗಿದೆ ಎಂದು ವೀರಕಂಭ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಹೇಳಿದರು.

ಓಂಕಾರ ಫ್ರೆಂಡ್ಸ್ ವೀರಕಂಭ ವತಿಯಿಂದ ದಿ.ಬಾಬು ಪೂಜಾರಿ ಅವರ ಕುಮೇರು ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕೆಸರ್ದ ಕಂಡೋಡು ಕುಸಲ್ದ ಗೊಬ್ಬುಲು ನಾಲ್ಕನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಗದ್ದೆಗೆ ಹಾಲೆರೆದು ಉದ್ಘಾಟಿಸಿ ಮಾತನಾಡಿದರು.

ಮಜಿ ವೀರಕಂಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ, ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ ಪ್ರಭು, ಕ್ಯಾಂಪ್ಕೋ ಉದ್ಯೋಗಿ ವಾಸು ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಸ್ವಾಗತಿಸಿದರು. ಗೋಪಾಲ ಗುಂಡಿಮಜಲು ನಿರೂಪಿಸಿದರು.

ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ಮಜಿ ಶಾಲಾ ಮಕ್ಕಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ವೀರಕಂಭ ಗ್ರಾಮ ವ್ಯಾಪ್ತಿಯ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

\https://www.vijayavani.net/veeramangala-pmshri-school-wins-best-school-award

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net