

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರು ಎಂದರೆ ಸಮಾಜಕ್ಕೆ 2ನೇ ಸೂರ್ಯ ಇದ್ದಂತೆ. ಗುರುಗಳಲ್ಲಿ ಮಾತೃ ಹೃದಯದ ಮಮತೆ ಇದ್ದರೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯ. ಮಕ್ಕಳಲ್ಲಿ ಒಳ್ಳೆಯ ಮËಲ್ಯಗಳನ್ನು ಕಲಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ. ಅಂಥ ವೃತ್ತಿಯನ್ನು ಯಶಸ್ವಿಯÁಗಿ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಎಸ್.ಬಿ. ಕೇಸರಿ ಅವರ ಕಾರ್ಯ ಮÁದರಿ ಎಂದು ಯೋಗ ಗುರು ಶ್ರೀ ಚನ್ನಬಸವಣ್ಣ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮುರಕಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ನಿವೃತ್ತರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಬಿ. ಕೇಸರಿ ಅವರ ಅಭಿನಂದನಾ ಸಮಾರಂಭ ಹಾಗೂ `ಕೇಸರಿ ಪರ್ವ' ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕೇಸರಿ ಅವರ ಕಾರ್ಯಗಳು ಶಿಕ್ಷಕರಿಗೆ ಮÁದರಿ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅವರು ನೀಡಿದ ಮಾರ್ಗದರ್ಶನ ಮಹತ್ವದ್ದು. ಸೇವಾ ಅವಽಯಲ್ಲಿ ಶಾಲೆ ಮತ್ತು ಮಕ್ಕಳ ಬಗ್ಗೆ ಬದ್ಧತೆಯಿಂದ ಶ್ರಮಿಸಿ ಆದರ್ಶ ಗುರು ಆಗಿದ್ದಾರೆ ಎಂದರು.
ಎಐಪಿಟಿ ಕಾಯÁðಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಕೇಸರಿ ಗುರುಗಳು ಸಂಘಟನಾ ಚತುರರು. ಶಿಕ್ಷಣ ಇಲಾಖೆಯಲ್ಲಿ ಅವರ ಕಾರ್ಯದಕ್ಷತೆ, ಅಽಕಾರಿಗಳು, ಶಿಕ್ಷಕರೊಂದಿಗಿನ ಒಡನಾಟ ಅನುಕರಣೀಯ ಎಂದರು.
ಮಾಜಿ ಶಾಸಕಿ ಸೀಮÁ ಮಸೂತಿ ಮಾತನಾಡಿದರು. ಲಕ್ಷೆ÷್ಮÃಶ್ವರ ಚಂದನ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷರ ಟಿ. ಈಶ್ವರ, ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಶಿಕ್ಷಣ ಇಲಾಖೆ ಅಽಕಾರಿ ಬಿ.ಕೆ.ಎಸ್. ವರ್ಧನ, ಡಾ. ವಿಜಯಕುಮಾರ, ರಂಗನಾಥ ವಾಲ್ಮೀಕಿ, ಡಾ. ಎಸ್.ಟಿ. ಅರಸನಾಳ, ನೌಕರರ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ದೇವಿದಾಸ ಶಾಂತಿಕರ, ಇತರರಿದ್ದರು.