ಕೆಸರ್ದ ಕೂಟ ಆಮಂತ್ರಣ ಪತ್ರಿಕೆ ಬಿಡುಗಡೆ

amantrana bidugade..
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.
Published on

ಕಾರ್ಕಳ: ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಕಾರ್ಕಳ ಘಟಕದ ಆತಿಥ್ಯದಲ್ಲಿ, ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದೊಂದಿಗೆ ಆಗಸ್ಟ್ 3ರಂದು ಕಾರ್ಕಳ ಸೂರಾಲು ಕಂಬಳ ಗದ್ದೆಯಲ್ಲಿ ಕೆಸರ್ದ ಕೂಟ ಸಂಭ್ರಮ ಆಯೋಜಿಸಲಾಗಿದೆ. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ನಡೆದ ಸಮಿತಿಯ ಮಾಸಿಕ ಸಭೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ತಾರಾನಾಥ್ ಕೋಟ್ಯಾನ್ ಸೂರಾಲು ಮಾತನಾಡಿ, ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ಹಲವಾರು ವೈಯಕ್ತಿಕ ಪಂದ್ಯಗಳು ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಡೆಯಲಿವೆ ಎಂದರು.

ಯುವವಾಹಿನಿ ಕೇಂದ್ರ ಸಮಿತಿ ಗೌರವ ಸಲಹೆಗಾರ ಟಿ.ಎನ್.ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕೆ.ಪೂಜಾರಿ, ಉಪಾಧ್ಯಕ್ಷ ಅಶೋಕ್‌ಕುಮಾರ್ ಪಡ್ಪು, ವಿದ್ಯಾ ರಾಕೇಶ್, ಕಾರ್ಯದರ್ಶಿ ಬಾಬು ಪೂಜಾರಿ ಇದ್ಪಾಡಿ, ಕಾರ್ಕಳ ಘಟಕದ ಅಧ್ಯಕ್ಷೆ ಮಮತಾ ಅಂಚನ್, ನಿಕಟಪೂರ್ವ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ, ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಪೂಜಾರಿ ಕೆರ್ವಾಶೆ, ಕಾರ್ಯದರ್ಶಿ ಸಂದೇಶ್ ಕೋಟ್ಯಾನ್, ಕ್ರೀಡಾ ನಿರ್ದೇಶಕ ಮಂಜುನಾಥ ಕೋಟ್ಯಾನ್ ಸೂರಾಲು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net