

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ಓಂಕಾರ ಫ್ರೆಂಡ್ಸ್ ವತಿಯಿಂದ 3ನೇ ವರ್ಷದ ಕೆಸರ್ದ ಕಂಡೊಡು ಕುಸಲ್ದ ಗೊಬ್ಬು -2024 ಕಾರ್ಯಕ್ರಮ ವೀರಕಂಭ ಗ್ರಾಮದ ಕುಮೇರು ಗದ್ದೆಯಲ್ಲಿ ಜರುಗಿತು.
ವೀರಕಂಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ ಪ್ರಭು ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕ್ರೀಡಾಕೂಟದ ಗದ್ದೆಗೆ ಹಾಲು ಎರೆದು ಫಲಪುಷ್ಪ ಸಮರ್ಪಿಸಿದರು. ಹಿರಿಯರಾದ ಉವಪ್ಪ ನಾಯ್ಕ, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಉದ್ಯಮಿ ಸುಧಾಕರ್ ವಿ., ಓಂಕಾರ ಫ್ರೆಂಡ್ಸ್ ಅಧ್ಯಕ್ಷ ಕೀರ್ತನ್ ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ.ನಿರೂಪಿಸಿದರು.