ಮಕ್ಕಳಿಗೆ ಪುರಾತನ ಸಂಸ್ಕೃತಿ ನೆನಪಿಸುವ ಕಾರ್ಯ : ಶ್ರೀಶಕುಮಾರ್ ಆಶಯ

New Project (9)
Published on

ಪುತ್ತೂರು ಗ್ರಾಮಾಂತರ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ದೊರೆಯುತ್ತಿಲ್ಲ. ಹಾಗಾಗಿ ಸಾಂಪ್ರದಾಯಿಕ ಆಚರಣೆಗಳ ಮೂಲಕ ಮಕ್ಕಳಿಗೆ ಪುರಾತನ ಪದ್ಧತಿಗಳನ್ನು ನೆನಪಿಸುವ ಕಾರ್ಯ ಮಾಡಬೇಕಾದ ಅಗತ್ಯವಿದೆ ಎಂದು ಈಶ್ವರಮಂಗಲದ ಉದ್ಯಮಿ ಶ್ರೀಶಕುಮಾರ್ ರೈ ಮರಕಡ ಅಭಿಪ್ರಾಯಪಟ್ಟರು.

ಈಶ್ವರಮಂಗಲದ ಮರಕಡ ಗದ್ದೆಯಲ್ಲಿ ಪುತ್ತೂರಿನ ಎಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ವಿವಿಧ ಕ್ರೀಡೆಗಳೊಂದಿಗೆ ‘ಕೆಸರ್‌ದ ಗೊಬ್ಬು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈವಗಳ ಪರಿಚಾರಕ ರವಿ ಕುತ್ಯಾಳ ಮುಖ್ಯ ಅತಿಥಿಯಾಗಿದ್ದರು. ಎಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಇನ್ನೀಸ್ ಡಿಸೋಜ, ಉಪನ್ಯಾಸಕರಾದ ದಿಶಾಂತ್, ಪ್ರನೀತ್, ರೇಣುಕಾ ಕೆ. ಮತ್ತು ಪ್ರಮೀಳಾ, ಎಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಂ ಅಧ್ಯಕ್ಷ ಸುಜನ್, ವಸಂತ ಮಡ್ಯಾಳಮೂಲೆ ಮತ್ತಿತರರಿದ್ದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಿರೀಶ್ ರೈ ಮರಕಡ, ಜನಾರ್ದನ ಮಡ್ಯಾಳ ಮೂಲೆ, ಸಂಜೀವ ರೈ ಬೆಡಿಗದ್ದೆ ಮತ್ತಿತರರಿದ್ದರು. ಉಪನ್ಯಾಸಕಿ ಜಲಜಾ ಎಸ್.ಎ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net