ಕ್ರೀಡೋತ್ಸವದಿಂದ ಸಂಸ್ಕೃತಿ ಬೆಳೆಸುವ ಕಾರ್ಯ : ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಭುವನಾಭಿರಾಮ ಉಡುಪ ಹೇಳಿಕೆ

New Project (19)
Published on

ಕಿನ್ನಿಗೋಳಿ: ಕೆಸರುಗದ್ದೆ ಕ್ರೀಡೋತ್ಸವದ ಮೂಲಕ ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಅಭಿನಂದನೀಯ ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.

ಕಿನ್ನಿಗೋಳಿ ಸಮೀಪದ ಎಳತ್ತೂರಿನಲ್ಲಿ ಎಳತ್ತೂರು ಫ್ರೆಂಡ್ಸ್ ಕ್ಲಬ್ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರಾದ ಚಂದ್ರಹಾಸ ಶೆಟ್ಟಿ, ಗೌರಿ ಎಂ.ಸುವರ್ಣ, ಲಲಿತಾ ಪೂಜಾರ‌್ತಿ ಅವರನ್ನು ಗೌರವಿಸಲಾಯಿತು.

ಎಳತ್ತೂರು ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಎಳತ್ತೂರು ನಡಿಯಾಲ್ ವೇಣುಗೋಪಾಲ ಶೆಟ್ಟಿ, ದೇವಸ್ಥಾನದ ಅರ್ಚಕ ನಾಗ ಭಟ್, ಸುರೇಶ್ ಶೆಟ್ಟಿ ನಡಿಯಾಲ್‌ಗುತ್ತು, ಶಂಕರ ಶೆಟ್ಟಿ, ಪಾಂಡು ಪೂಜಾರಿ, ಜಯಲಕ್ಷ್ಮೀ ಶೆಟ್ಟಿ, ಸಿಂಚನ ಶಶಿಕಾಂತ್, ಪ್ರಶಾಂತ್ ಶೆಟ್ಟಿ, ಮೋಹನ್ ಶೆಟ್ಟಿ, ಮಾಜಿ ತಾಪಂ ಸದಸ್ಯ ದಿವಾಕರ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net