ಕೆರೆಯಲ್ಲಿ ಮುಳುಗಿ ಮಕ್ಕಳು ಸಾವು

KRR 20-1
Published on

ಕೆರೂರ: ಸಮೀಪದ ಉಗಲವಾಟ ಗ್ರಾಮದ ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಭಾನುವಾರ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ಸಂಗಳ ಗ್ರಾಮದ ಅಯಾನ್ ಮುಲ್ಲಾ (4) ಹಾಗೂ ಬಾಗಲಕೋಟೆಯ ಸೀಮಿಕೇರಿ ಗ್ರಾಮದ ಮಯಾಕ್ ಕೆರೂರ (7) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.

ಘಟನೆ ವಿವರ: ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಬಿಬಿಜಾನ್ ಅಜ್ಜಿ ಮನೆಗೆ ಬಂದ ಈ ಮಕ್ಕಳು ಶೌಚಕ್ಕೆಂದು ಕೆರೆ ಬಳಿ ತೆರಳಿದ್ದಾರೆ. ತಮ್ಮ ಅಯಾನ್ ಕಾಲುಜಾರಿ ಕೆರೆಗೆ ಬಿದ್ದಿದ್ದಾನೆ. ಅದನ್ನು ಕಂಡ ಅಕ್ಕ ಮಯಾಕ್ ತಮ್ಮನನ್ನು ಕಾಪಾಡಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾಳೆ. ಕೆರೂರ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net