ಫುಟ್‌ಪಾತ್ ಏರಿದ ಲಾರಿ; ಮೂವರ ಸಾವು

KRR NEWS 17-1
Published on

ಕೆರೂರ: ಪಟ್ಟಣದ ಸೊಲ್ಲಾಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ರಸ್ತೆ ಬದಿಯ ಫುಟ್‌ಪಾತ್ ಮೇಲಿನ ಅಂಗಡಿಗಳಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ಮಾನಂದಪ್ಪ ಕರಿ (17), ಪೂಜಾ ಹಳಪೇಠೆ (22), ಲಕ್ಷ್ಮಣ ಹಾದಿಮನಿ (32) ಮೃತಪಟ್ಟವರು. ಮಂಗಳವಾರ ಮಧ್ಯಾಹ್ನ 2-55 ಗಂಟೆ ಸುಮಾರಿಗೆ ಪಟ್ಟಣದ ಹೆಸ್ಕಾಂ ಕಚೇರಿ ಮುಂಭಾಗ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಫುಟ್‌ಪಾತ್ ಮೇಲಿರುವ ಅಂಗಡಿಗಳಿಗೆ ಗುದ್ದಿದೆ.

ಓರ್ವ ಬಾಲಕ ಸೇರಿ ಆರು ಜನರನ್ನು ಕೆರೂರ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ಸಾಗಿಸಿದರು. ಕೆರೂರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net