ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

KRR NEWS 6-1
Published on

ಕೆರೂರ: ಬೀಳಗಿ ಕ್ಷೇತ್ರದ ಸರ್ವಾಂಗೀನ ಅಭಿವೃದ್ಧಿಗೆ ಹಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.

ಬಾದಾಮಿ ತಾಲೂಕಿನ ಬೀಳಗಿ ಮತಕ್ಷೇತ್ರದ ಇನಾಂ ಹುಲ್ಲಿಕೇರಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪವಿಭಾಗದ ಯೋಜನೆಯಡಿ ಇನಾಂ ಹುಲ್ಲಿಕೇರಿ ಗ್ರಾಮದಿಂದ ಹಲಕುರ್ಕಿವರೆಗೆ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, 13 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿ, ಎಸ್‌ಟಿ ಕಾಲನಿಯಲ್ಲಿ ಸಿಸಿ ರಸ್ತೆ ಕಾಮಗಾರಿ, 15 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದರು.

ಜಿಪಂ ಸದಸ್ಯ ಹೂವಪ್ಪ ರಾಠೋಡ, ರಂಗಪ್ಪ ಬಂಡಿವಡ್ಡರ, ಡಿ.ಬಿ. ಮತ್ತಿಕಟ್ಟಿ, ಡಿ.ಎಸ್. ಪಾಟೀಲ, ಬಸವರಾಜ ಕಂಬಾರ, ಮಂಜುನಾಥ ಹಡಪದ, ಈರಣ್ಣ ವಜ್ರಮಟ್ಟಿ, ಮಲ್ಲಯ್ಯ ಸುರಗಿಮಠ, ಮಲ್ಲು ಕಂಟೆಪ್ಪನವರ, ಮಲ್ಲಪ್ಪ ಬುವಣ್ಣವರ, ಶಂಕರಗೌಡ ಪಾಟೀಲ, ಅಭಿಯಂತರ ಎಸ್.ಎಸ್. ಹಿರೇಗೌಡರ, ಕೃಷ್ಣ ನಾಯಕ, ಎಂ.ಎಂ. ಮಕಾನದಾರ ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net