

ಮೈಸೂರು: ಮೈಸೂರು ತಾಲೂಕು ಕೇರ್ಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2024-25ನೇ ಸಾಲಿನ ಆರ್ಥಿಕ ವರ್ಷದ ವಹಿವಾಟಿನಲ್ಲಿ 1.14 ಲಕ್ಷ ರೂ. ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎಚ್. ಮಹದೇವ್ ಹೇಳಿದರು.
ಕೇರ್ಗಹಳ್ಳಿಯ ಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದಲ್ಲಿ 959 ಸದಸ್ಯರಿದ್ದು 622 ರೈತರಿಗೆ 8.21 ಕೋಟಿ ರೂ. ಸಾಲ ನೀಡಲಾಗಿದೆ. ಇದರಲ್ಲಿ 9 ಜನರು ಹಣ ಕಟ್ಟದೆ ಸುಸ್ತಿದಾರರಾಗಿದ್ದಾರೆ. ಸುಸ್ತಿದಾರರು ಸಕಾಲಕ್ಕೆ ಸಂಘಕ್ಕೆ ಹಣಕಟ್ಟುವ ಮೂಲಕ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಹೊಸಬರಿಗೆ ಸಾಲ ನೀಡಲಾಗುವುದು. ಸಂಘಕ್ಕೆ ಹೊಸದಾಗಿ ಕಟ್ಟಡ ಕಟ್ಟಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಕೆಂಚಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಪ್ರಭುಸ್ವಾಮಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಡಿ. ಸಿದ್ದೇಗೌಡ, ಚಿಕ್ಕವನು, ಚಿಕ್ಕಣ್ಣನಾಯಕ, ಉಪಾಧ್ಯಕ್ಷೆ ಬಸಮ್ಮ, ನಿರ್ದೇಶಕರಾದ ಎಸ್. ಸಿದ್ದೇಗೌಡ, ಪುಟ್ಟಸ್ವಾಮಿ, ಗೌರಮ್ಮ, ಎಂ. ಬಸವರಾಜು, ಎಚ್.ಹೊಂಬೇಗೌಡ, ಜವರೇಗೌಡ, ಚಿಕ್ಕತಿಮ್ಮಯ್ಯ, ಬಿ.ಕುಮಾರ, ಗೂಳಿನಾಯ್ಕ, ಮೇಲ್ವಿಚಾರಕ ವಿ.ಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಗಶಾಂತೇಗೌಡ, ನೌಕರ ಎಂ. ಮಹದೇವ, ಮಲ್ಲಯ್ಯ ಇದ್ದರು.