

ಚಿತ್ರದುರ್ಗ:ಭದ್ರಾಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ತೊಡಾಗಿರುವ ಚಿಕ್ಕಮಗಳೂರು ಜಿಲ್ಲೆ ಅಬ್ಬಿನಹೊಳಲು ಬಳಿಯ ಭೂಸ್ವಾಧೀನ ಸಮಸ್ಯೆಯನ್ನು ನಿವಾರಿಸುವಂತೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ‌್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.
ರಾಜ್ಯರೈತಸಂಘ ಹಾಗೂ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಕಾತ್ರಾಳು ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಮಾತನಾಡಿ,ಅಬ್ಬಿನಹೊಳಲು ಬಳಿ 1.90 ಕಿ.ಮೀ.ಉದ್ದ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಬಿಟ್ಟುಕೊಡಲು ಕೆಲವು ರೈತರು ತಕರಾರು ಮಾಡುತ್ತಿದ್ದಾರೆ. ಇದರಿಂದ ಯೋಜನೆ ವಿಳಂಬವಾಗುತ್ತಿದೆ. ಈ ಸಮಸ್ಯೆ ಬಗೆಹರಿಸುವುದಕ್ಕಾಗಿ ಸಾಣೇಹಳ್ಳಿ ಶ್ರೀಗಳನ್ನು ಕೋರಲಾಗಿದ್ದು,ಮತ್ತೊ ಮ್ಮೆ ಎಲ್ಲರೂ ಶ್ರೀಗಳನ್ನು ಭೇಟಿ ಮಾಡೋಣವೆಂದರು.
ಎಲ್ಲೆಡೆ ವಿಪರೀತ ಮಳೆಯಾಗುತ್ತಿದೆ,ನಮ್ಮ ಜಿಲ್ಲೆಯಲ್ಲೂ ಬಹುತೇಕ ಕೆರೆಗಳು ಭರ್ತಿಯಾಗಿವೆ. ಮಳೆಗಾಲಕ್ಕೂ ಮುನ್ನಾ ಎಲ್ಲೆ ಕೆರೆಗಳ ಹೂಳು ತೆಗೆಸಿದರೆ ಹೆಚ್ಚಿನ ನೀರು ಸಂಗ್ರಹವಾಗಿ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಗಂಭೀರವಾಗಿ ಕೆರೆಗಳ ಹೂಳೆತ್ತ ಬೇಕು ಹಾಗೂ ಏರಿಗಳನ್ನು ದುರಸ್ತಿ ಪಡಿಸುವಂತೆ ಸರ್ಕಾರವನ್ನು ಕೋರಿದರು.
ಸಮಿತಿ ಅಧ್ಯಕ್ಷ ಟಿ.ನುಲೇನೂರು ಶಂಕರಪ್ಪ ಮಾತನಾಡಿ,ಜಿಲ್ಲೆಯಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು,ಅವುಗಳನ್ನು ತೆರವು ಗೊಳಿಸುವ ಹೊಣೆ ಸರ್ಕಾರದ ಮೇಲಿದೆ ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ,ಅನೇಕ ವರ್ಷ ಗಳ ನಂತರ ಕಾತ್ರಾಳು ಕೆರೆ ಕೋಡಿ ಬಿದ್ದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾಗರಾಜ್‌ಮುದ್ದಾಪುರ,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,ಧನಂಜಯ ಹಂಪಯ್ಯನಮಾಳಿಗೆ, ಕಲ್ಲೇನಹಳ್ಳಿ ಕುಮಾರ್, ಎಮ್ಮೆಹಟ್ಟಿ ಮೋ ಹನ್,ಕೋಗುಂಡೆ ರವಿ,ಶಿವನಕೆರೆ ಮಂಜಣ್ಣ,ನಿವೃತ್ತ ಪ್ರಾಚಾರ‌್ಯ ಅಶೋಕುಮಾರ್ ಸಂಗೇನಹಳ್ಳಿ,ನಿವೃತ್ತ ದೈಹಿಕ ಶಿಕ್ಷಕ ಕೊಟ್ರೇಶಿ, ಸು ಮಂಗಲಾ,ಜ್ಯೋತಿ ಶಂಕರಮೂರ್ತಿ ಮತ್ತಿತರರು ಇದ್ದರು.