ಮೀನು ಹಿಡಿಯಲು ಹೋದ ಯುವಕ ಕೆರೆಪಾಲು

TKE RAVIKUMAR)
ರವಿಕುಮಾರ್
Published on

ತರೀಕೆರೆ: ದಳವಾಯಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕ ತೆಪ್ಪ ಮಗುಚಿ ಮೃತಪಟ್ಟಿದ್ದಾನೆ.

ಪಟ್ಟಣದ ಬೇಗೂರಯ್ಯನ ಬೀದಿ ರವಿಕುಮಾರ್ (38) ಮೃತ ದುರ್ದೈವಿ. ಮಂಗಳವಾರ ಬೆಳಗಿನ ಜಾವ ದಳವಾಯಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ರವಿಕುಮಾರ್ ತೆಪ್ಪ ಮಗುಚಿದ್ದರಿಂದ ನೀರಿನಲ್ಲಿ ಮುಳುಗಿದ್ದಾನೆ. ಬೆಳಗ್ಗೆ 9 ಗಂಟೆ ಆದರೂ ವಾಪಸ್ ಬರದಿದ್ದರಿಂದ ಕುಟುಂಬಸ್ಥರು ಕೆರೆಗೆ ಹೋಗಿ ನೋಡಿದಾಗ ತೆಪ್ಪ ಮಗುಚಿಕೊಂಡಿರುವುದು ಗೋಚರಿಸಿದೆ. ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಶವವನ್ನು ಕೆರೆಯಿಂದ ತೆಗೆದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net