ಬಯಲು ಬಹಿರ್ದೆಸೆಗೆ ತೆರಳಿದ್ದ ಇಬ್ಬರ ಮೇಲೆ ಕರಡಿ ದಾಳಿ: ಗ್ರಾಮಸ್ಥರು ದೌಡಾಯಿಸಿದ ಪರಾರಿಯಾದ ಜಾಂಬವ

Bear
Published on

ಕೂಡ್ಲಿಗಿ: ಸಮೀಪದ ಕೆರೆಕಾವಲರಹಟ್ಟಿ ಹೊರವಲಯದಲ್ಲಿ ಸೋಮವಾರ ಬಯಲು ಬಹಿರ್ದೆಸೆಗೆ ತೆರಳಿದ್ದ ಇಬ್ಬರ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ನಾಗರಾಜ (27), ವೆಂಕಟೇಶ (52) ಗಾಯಗೊಂಡವರು.

ಇಬ್ಬರು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾಗ ನಾಗರಾಜನ ಮೇಲೆ ಕರಡಿ ದಾಳಿ ಮಾಡಿದೆ. ಅದರಿಂದ ತಪ್ಪಿಸಿಕೊಳ್ಳಲು ಬೋರಲಾಗಿ ಮಲಗಿದ್ದರಿಂದ ಕರಡಿ ತಲೆಗೆ ಉಗುರಿನಿಂದ ಗಾಯಗೊಳಿಸಿದೆ. ಬಳಿಕ ವೆಂಕಟೇಶ ಮೇಲೆ ಎರಗಿದ್ದು, ಪರಚಿದ ಗಾಯಗಳಾಗಿವೆ. ಸುದ್ದಿ ತಿಳಿದು ಗ್ರಾಮಸ್ಥರು ಬರುತ್ತಿದ್ದಂತೆ ಕರಡಿ ಓಡಿ ಹೋಗಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ವಿಮ್ಸ್‌ಗೆ ಕಳಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕರಡಿ ಹಿಡಿದು ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net