ಭಜನಾ ಸಂಕೀರ್ತನೆಯಿಂದ ದೇವರ ಕೃಪೆ : ಪಟೇಲ್ ವಾಸುದೇವರಾವ್ ಪುನರೂರು ಹೇಳಿಕೆ

New Project (14)
Published on

ಮೂಲ್ಕಿ: ಸಂಘಟಿತರಾಗಿ ನಡೆಸುವ ಭಜನಾ ಸಂಕೀರ್ತನೆಯಿಂದ ದೇವರ ಕೃಪಾಶೀರ್ವಾದ ಲಭಿಸಿ ಪ್ರಾದೇಶಿಕ ಅಭಿವೃದ್ಧಿ ಸಹಿತ ಶಾಂತಿ ಸಮಾಧಾನ ಲಭ್ಯವಾಗಲಿದೆ ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ಪುನರೂರು ಹೇಳಿದರು.

ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಚಾಲನೆ ನೀಡಿದರು. ಮಂದಿರದ ಅಧ್ಯಕ್ಷ ಅನಂತ ಪದ್ಮನಾಭ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಪಡುಪಣಂಬೂರು ಗ್ರಾ.ಪಂ. ಸದಸ್ಯ ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು, ಉದ್ಯಮಿ ಪ್ರದೀಪ್‌ಕುಮಾರ್, ಹರೀಶ್ ಪೂಜಾರಿ, ಶಿಕ್ಷಕಿ ಸುಜಾತಾ ನಾರಾಯಣ್ ಭಂಡಾರಿ, ಯೋಗಧಾಮದ ಜ್ಯೋತಿ ದೇವದಾಸ್ ರಾವ್, ಅರ್ಚಕ ರಾಘವೇಂದ್ರ ರಾವ್, ಮೂಲ್ಕಿ ಎಲ್‌ಐಸಿ ಶಾಖಾ ಪ್ರಬಂಧಕ ಪ್ರಕಾಶ್ ಆಚಾರ್ಯ, ಮಾಧವ ಶೆಟ್ಟಿಗಾರ್, ರತ್ನ ಶಿವಾನಂದ ಕೋಟ್ಯಾನ್, ಕರುಣಾಕರ್, ಲಕ್ಷ್ಮಣ್ ಪೂಜಾರಿ, ಮನೋಹರ್ ಕುಂದರ್, ಸುರೇಂದ್ರ ಪದ್ಮಶಾಲಿ, ಲಲಿತಾ ಭಾಸ್ಕರ್ ಕೆರೆಕಾಡು ಉಪಸ್ಥಿತರಿದ್ದರು.

ಚೇತನ್ ಪುನರೂರು ಸ್ವಾಗತಿಸಿದರು. ರಾಜೇಶ್ ಪಿ.ಆರ್.ನಿರೂಪಿಸಿದರು. ಸತೀಶ್ ವಂದಿಸಿದರು. ವಿವಿಧ ಭಜನಾ ತಂಡದಿಂದ ಭಜನಾ ಸಂಕೀರ್ತನಾ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net