ಕೆರಸಮಂಗಳ ಸರ್ಕಾರಿ ಪ್ರಾಥಮಿಕ ಶಾಲೆ ತರಗತಿಯಲ್ಲಿ ನಿದ್ರೆಗೆ ಜಾರಿದ ಶಿಕ್ಷಕ

2 MBL 02
Published on

ಮುಳಬಾಗಿಲು: ತಾಲೂಕಿನ ನಂಗಲಿ ಕ್ಲಸ್ಟರ್ ವ್ಯಾಪ್ತಿಯ ಕೆರಸಮಂಗಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿಯೊಂದರಲ್ಲಿ ಶಿಕ್ಷಕ ಆನಂದಪ್ಪ ಗೋಣಿಚೀಲದ ಮೇಲೆ ಮಲಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ವಾಟ್ಸ್‌ಆ್ಯಪ್‌ಗಳಿಗೂ ಕಳುಹಿಸಿದ್ದು, ಈ ಬಗ್ಗೆ ವರದಿ ನೀಡುವಂತೆ ಬಿಇಒ ಪಿ.ಸೋಮೇಶ್‌ಗೆ ಹಿರಿಯ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯೆಗೆ ಬಿಇಒ ಅವರನ್ನು ಸಂಪರ್ಕಿಸಿದಾಗ ‘ಅವರಿಗೆ ತಲೆನೋವು ಇದ್ದ ಕಾರಣ ಮಲಗಿದ್ದರು, ಆರೋಗ್ಯ ಸರಿ ಇಲ್ಲದಿದ್ದರೆ ರಜೆ ಪಡೆಯಿರಿ. ಹಾಗೆ ಶಾಲೆಯ ಕೊಠಡಿಯಲ್ಲಿ ಮಲಗಬಾರದು’ ಎಂದು ಸೂಚಿಸಿದ್ದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net