ಸಾರ್ವಜನಿಕ ಸ್ಥಳದಲ್ಲಿ ಕೇರಳದ ತ್ಯಾಜ್ಯ ನೀರು ಖಾಲಿ ಮಾಡಿದ ಬಗ್ಗೆ ಪ್ರಕರಣ

WhatsApp Image 2023-08-16 at 21.19.57
Published on

ವಿಟ್ಲ: ಕೇರಳದ ಕಡೆಯಿಂದ ಕಲುಷಿತ ನೀರನ್ನು ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಖಾಲಿ ಮಾಡುತ್ತಿರುವ ವಿಚಾರದಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಬನ್ನೂರು ನಿವಾಸಿ ಬಿ. ಅಬ್ದುಲ್ ಹಮೀದ್ (52) ಚಲಾಯಿಸುತ್ತಿದ್ದ ಟ್ಯಾಂಕರ್ ಆ.17ರಂದು ವಿಪರೀತ ದುರ್ವಾಸನೆ ಬೀರುವ ಕಲುಷಿತ ನೀರು ಸಾರ್ವಜನಿಕ ರಸ್ತೆಗೆ ಚೆಲ್ಲಿಕೊಂಡು ಹೋಗುತ್ತಿರುವುದು ಕಂಡುಬAದಿದೆ. ವಿಟ್ಲ ಕಸಬಾ ಗ್ರಾಮದ ಕಾಶಿಮಠದಲ್ಲಿ ಟ್ಯಾಂಕರ್ ಲಾರಿಯನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿರುವುದು ಪತ್ತೆಯಾಗಿತ್ತು. ಟ್ಯಾಂಕರ್ ವಾಹನದಲ್ಲಿದ್ದ ಕಲುಷಿತ ನೀರಿನ ಸಾಗಾಟದ ಬಗ್ಗೆ ಕೇಳಿದಾಗ ಟ್ಯಾಂಕರ್ ನಲ್ಲಿ ಕಲುಷಿತ ನೀರನ್ನು ಕೇರಳ ಕಡೆಯಿಂದ ತುಂಬಿಸಿಕೊAಡು ಬಂದು ಕರ್ನಾಟಕದ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ಖಾಲಿ ಮಾಡಲು ಸಾಗಾಟ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದ ಬಗ್ಗೆ ಬಂಟ್ವಾಳ ಕೇಪು ಗ್ರಾಮದ ನಿವಾಸಿ ರಾಘವ (42) ಅವರು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net