ಕೇರಳ ತುಳು ಅಕಾಡೆಮಿಯಿಂದ ಆಟಿದ ಅಟ್ಟಣೆ

aati 1
ಆಟಿದ ಅಟ್ಟಣೆ ಸಮಾರಂಭಕ್ಕೆ ಸದಾಶಿವ ಶೆಟ್ಟಿ ಕುಳೂರು ಚಾಲನೆ ನೀಡಿದರು. ಎ.ಕೆ.ಎಂ.ಅಶ್ರಫ್, ಕೆ.ಆರ್.ಜಯಾನಂದ ಮೊದಲಾದವರಿದ್ದರು.
Published on

ಮಂಜೇಶ್ವರ: ಕೇರಳ ತುಳು ಅಕಾಡೆಮಿ ವತಿಯಿಂದ ಪಾವೂರು ಸಮೀಪದ ಬಾಚಳಿಕೆಯಲ್ಲಿರುವ ಸ್ನೇಹಾಲಯದಲ್ಲಿ, ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಆಟಿದ ಅಟ್ಟಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಫಾಟಿಸಿದರು. ಸದಾಶಿವ ಶೆಟ್ಟಿ ಕುಳೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಾವರ ಕ್ಷೇತ್ರದ ದೈವಪಾತ್ರಿ ರಾಜ ಬೆಲ್ಚಾಡ ಶುಭ ಹಾರೈಸಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉಪಸ್ಥಿತರಿದ್ದರು.

ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ, ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ ಎಸ್, ಅಕಾಡೆಮಿ ಮಾಜಿ ಅಧ್ಯಕ್ಷ ವಕೀಲ ಸುಬ್ಬಯ್ಯ ರೈ, ಹಾಜಿರಾ ಮೂಸ, ರವೀಂದ್ರನಾಥ ಆಳ್ವ, ಸಂತೋಷ್ ಮಾಡ, ಡಾ.ಬಿ.ರಮೇಶ, ಪಿ.ಆರ್.ಶೆಟ್ಟಿ ಕುಳೂರು, ಕೃಷ್ಣಪ್ಪ ಪೂಜಾರಿ, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಅಕಾಡೆಮಿ ಸದಸ್ಯ ವಕೀಲ ಚಂದ್ರಮೋಹನ್ ಸ್ವಾಗತಿಸಿದರು. ಅಜಿತ್ ಎಂ.ಸಿ ಲಾಲ್‌ಭಾಗ್ ವಂದಿಸಿದರು. ಸದಸ್ಯ ಉದಯ ಸಾರಂಗ್ ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ತುಳುನಾಡಿನ ಖಾದ್ಯ

ಹಲವು ಬಗೆಯ ತುಳುನಾಡಿನ ಖಾದ್ಯ ತಯಾರಿಸಲಾಗಿತ್ತು. ಬಿರಿಂಡಾ ಸಾರ್, ಅನಾನಸ್ ಸಾರ್, ಕುಕ್ಕು ಸಾರ್, ಕುಡುತ ಸಾರ್, ತಿಮರೆ ಚಟ್ನಿ, ಕುಡು ಚಟ್ನಿ, ತಜಂಕ್ ಚಟ್ನಿ, ಬಿರಿಂಡಾ ಚಟ್ನಿ, ಪೆಲಕಾಯಿ ಚಟ್ನಿ, ಚೇವುದ ಇರೆತ ಚಟ್ನಿ, ಪತ್ರೊಡೆ, ಉಪ್ಪಡ್ ಪನ್ನೀರ್, ತಜಂಕ್ ತೊಪ್ಪು, ಬೇಳೆ ಸುಕ್ಕ, ಕೇನೆದ ಪುಂಡಿ, ನೀರ್ ದೋಸೆ, ಕಣಿಲೆ ಪದೆಂಗಿ ಗಸಿ, ಪುಂಡಿ ಗಸಿ, ತಜಂಕ್ ಅಂಬಡೆ, ಕಾಡುಕಂಚಲ ಪ್ರೈ, ರಾಗಿ ಮಣ್ಣಿ, ಮೆಂತೆ ಗಂಜಿ, ಬಂಗುಡೆ ಮೀನು ಸಾರ್, ಎಟ್ಟಿ ಚಟ್ಟಿ, ತೆಕ್ಕರೆ ತಲ್ಲಿ ಮೊದಲಾದ ಖಾದ್ಯಗಳಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net