ಪುತ್ರನನ್ನು ರಕ್ಷಿಸಲು ಹೊಳೆಗಿಳಿದ ಮಹಿಳೆ ನೀರುಪಾಲು

Kollur
Published on

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದ ಕೇರಳ ತಿರುವನಂತಪುರ ಯಾತ್ರಾರ್ಥಿ ಮಹಿಳೆ ಶನಿವಾರ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ತಿರುವನಂತಪುರದಿಂದ ಬಂದ 14 ಮಂದಿಯ ತಂಡದಲ್ಲಿದ್ದ ಮುರುಗನ್ ಎಂಬುವರ ಪತ್ನಿ ಚಾಂದಿ ಶೇಖರನ್(42) ನೀರುಪಾಲಾದವರು. ಅಗ್ನಿಶಾಮಕ ದಳ, ಕೊಲ್ಲೂರು ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದಾರೆ.

ಮುರುಗನ್ ಪತ್ನಿ ಚಾಂದಿ ಶೇಖರ್, ಪುತ್ರ ಆದಿತ್ಯನ್ ಹಾಗೂ ಇತರ ಕುಟುಂಬ ವರ್ಗದವರೊಂದಿಗೆ ಓಣಂ ಹಬ್ಬದ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಸ್ಥಳೀಯ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು. ಸಾಯಂಕಾಲ ಕುಟುಂಬದವರೊಂದಿಗೆ ಸೌಪರ್ಣಿಕಾ ಸ್ನಾನಘಟ್ಟಕ್ಕೆ ಬಂದಿದ್ದು ನದಿ ದಡದಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿದ್ದರು. ಈ ವೇಳೆ ಆದಿತ್ಯನ್ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಅವರನ್ನು ರಕ್ಷಣೆ ಮಾಡಲು ತಂದೆ ಮುರುಗನ್ ಹಾಗೂ ಈಜು ಬಾರದ ತಾಯಿ ಚಾಂದಿ ಶೇಖರ್ ನೀರಿಗೆ ಧುಮುಕಿದ್ದಾರೆ. ಈ ವೇಳೆ ಚಾಂದಿ ಶೇಖರ್ ಅವರು ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಮುರುಗನ್ ಮತ್ತು ಆದಿತ್ಯ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net