ಕೇರಳದ ವಿದ್ಯಾರ್ಥಿಗಳ ನಡುವೆ ಹೊಡೆದಾಟ ಬಿಡಿಸಲು ಹೋದ ಪೊಲೀಸರ ಮೇಲೂ ಹಲ್ಲೆ

images (6)
Published on

ಮಂಗಳೂರು: ನಗರದ ಎರಡು ಕಡೆ ವಿದ್ಯಾರ್ಥಿಗಳ ನಡುವೆ ತೀವ್ರ ಗಲಾಟೆ ನಡೆದಿದ್ದು ಬಿಡಿಸಲು ಹೋದ ಐವರು ಪೊಲೀಸರಿಗೂ ಕಲ್ಲು, ಇಂಟರ್ ಲಾಕ್ ಎಸೆದು ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಯೇನಪೋಯ ಡಿಗ್ರಿ ಕಾಲೇಜಿನಲ್ಲಿ 3ನೇ ವರ್ಷದ ಬಿಎಸ್ಪಿ ಹಾಸ್ಪಿಟಾಲಿಟಿ ಓದುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಎಂಬಾತ ಗುರುವಾರ ಸಂಜೆ ಏಳು ಗಂಟೆ ಸುಮಾರಿಗೆ ಬಾವುಟ ಗುಡ್ಡೆಯ ಲೈಟ್ ಹೌಸ್ ಅಪಾರ್ಟೆಂಟ್ ಬಳಿ ಬಂದಿದ್ದು ಅಲ್ಲಿ ತನ್ನ ಸ್ನೇಹಿತೆ ಸಿನಾನ್ ಜೊತೆ ಮಾತನಾಡುತ್ತಿದ್ದಾಗ ಎಂಟು ಜನರ ತಂಡ ಆದರ್ಶ್ ಮೇಲೆ ಹಲ್ಲೆ ನಡೆಸಿದೆ. ಇಂಟರ್ ಲಾಕ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಆದರ್ಶ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಆದರ್ಶ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಇವರ ಜಗಳ ಬಿಡಿಸಲು ಬಂದಿದ್ದ ಆದರ್ಶ್ ಸ್ನೇಹಿತರಾದ ಶ್ರವಣ್ ಮತ್ತು ಶೆನಿನ್ ಬಂದಿದ್ದು ಅವರಿಗೂ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಇವರ ಗಲಾಟೆಯಲ್ಲಿ ಎದುರಾಳಿ ತಂಡದ ಮಹಮ್ಮದ್ ಶರೀಫ್ ಎಂಬವನ ಮೇಲೂ ಹಲ್ಲೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿ ಎರಡೂ ತಂಡಕ್ಕೆ ಸೇರಿದ ಆದಿತ್ಯ, ಕೆನ್ ಜಾನ್ಸನ್, ಅಬ್ದುಲ್ ಶಾಹಿದ್, ಮೊಹಮ್ಮದ್, ವಿಮಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net