ಸಂಘಟನೆ ಬೆಳವಣಿಗೆಗೆ ಶ್ರಮ : ಬಿ.ನಾಗರಾಜ್ ಆಶಯ

New Project (15)
Published on

ಬದಿಯಡ್ಕ: ಸಂಘಟನೆ ಸದಸ್ಯರೆಲ್ಲರೂ ಸದಾ ಕ್ರಿಯಾಶೀಲರಾಗಿದ್ದು ಪರಸ್ಪರ ನಿರಂತರ ಸಂಪರ್ಕದ ಮೂಲಕ ಸಂಘಟನೆಯನ್ನು ಜೀವಂತವಾಗಿರಿಸಿಕೊಳ್ಳಬೇಕು. ನಾವೆಲ್ಲರೂ ಸಂಘಟನೆಯನ್ನು ಬೆಳೆಸಲು ಸದಾ ಶ್ರಮಿಸೋಣ ಎಂದು ಕೆಎಸ್‌ಪಿಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಬಿ.ನಾಗರಾಜ್ ಹೇಳಿದರು.

ಪೆರಡಾಲ ನವಜೀವನ ವಿದ್ಯಾಲಯದಲ್ಲಿ ಇತ್ತೀಚೆಗೆ ಕೇರಳ ರಾಜ್ಯ ಪೆನ್ಶನರ್ಸ್‌ ಸಂಘದ ಬದಿಯಡ್ಕ ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಬದಿಯಡ್ಕ ಘಟಕ ಅಧ್ಯಕ್ಷ ಮೈರ್ಕಳ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ ಮಾತನಾಡಿದರು. ಗೌರವಾಧ್ಯಕ್ಷ ಈಶ್ವರ ಭಟ್ ಪೆರ್ಮುಖ ಸಲಹೆ ಸೂಚನೆ ನೀಡಿದರು. ಹೊಸದಾಗಿ ಸಂಘಟನೆಗೆ ಸೇರ್ಪಡೆಗೊಂಡ ಬಾಲಸುಬ್ರಹ್ಮಣ್ಯ ಮಧುರಕಾನನ ಮತ್ತು ಲಲಿತಾಕುಮಾರಿ ನೀರ್ಚಾಲು ಅವರನ್ನು ಅಭಿನಂದಿಸಲಾಯಿತು. 2025-26ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ವಿದ್ಯಾಗಿರಿ ಆಯ್ಕೆಯಾದರು.

ಬದಿಯಡ್ಕ ಘಟಕ ಕಾರ್ಯದರ್ಶಿ ವೆಂಕಟರಾಜ ಚಾಳೆತ್ತಡ್ಕ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಉದನೇಶವೀರ ಕಿಳಿಂಗಾರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net