ಕೇರಳ ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆ ಆರಂಭ

8
Published on

ಕಾಸರಗೋಡು: ಕೇರಳಾದ್ಯಂತ ಎಸ್ಸೆಸೆಲ್ಸಿ-ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆಗಳು ಸೋಮವಾರ ಅರಂಭಗೊಂಡಿವೆ. ಬೆಳಗ್ಗೆ ಎಸ್ಸೆಸೆಲ್ಸಿ ಹಾಗೂ ಮಧ್ಯಾಹ್ನ ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆಗಳು ನಡೆದವು. 26ರವರೆಗೆ ಪರೀಕ್ಷೆ ನಡೆಯಲಿದೆ.

ರಾಜ್ಯದ 2964 ಪರೀಕ್ಷಾ ಕೇಂದ್ರಗಳಲ್ಲಿ 425861ಮಂದಿ ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಕೊಲ್ಲಿ ರಾಷ್ಟ್ರದ ಏಳು ಪರೀಕ್ಷಾ ಕೇಂದ್ರಗಳಲ್ಲಿ 682 ಮಂದಿ, ಲಕ್ಷದ್ವೀಪದ ಒಂಬತ್ತು ಕೇಂದ್ರಗಳಲ್ಲಿ 447 ಮಂದಿ ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದ ಒಟ್ಟು 217966 ಮಂದಿ ವಿದ್ಯಾರ್ಥಿಗಳು ಹಾಗೂ 209325 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 20581ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ.

ಇದರ ಜತೆಗೆ ಹೈಯರ್ ಸೆಕೆಂಡರಿ ಪ್ರಥಮ ವರ್ಷದ ಪರೀಕ್ಷೆ ಮಾ.6ರಿಂದ 29ರವರೆಗೆ ಜರುಗಲಿದೆ. ಎರಡನೇ ವರ್ಷದ ಪರೀಕ್ಷೆ ಮಾ.3ರಿಂದ ಆರಂಭವಾಗಿದ್ದು 26ರವರೆಗೆ ನಡೆಯಲಿದೆ. ಒಟ್ಟು 1190409 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net