ಕೇರಳ ಸಮಾಜದಿಂದ ರಾವೂರಲ್ಲಿ ಪಿತೃತರ್ಪಣ ಕಾರ್ಯಕ್ರಮ

nrp 4
Published on

ಎನ್.ಆರ್.ಪುರ: ತಾಲೂಕಿನ ಕೇರಳ ಹಿಂದು ಸಮಾಜದಿಂದ ತಾಲೂಕಿನ ರಾವೂರು ಗ್ರಾಮದ ವ್ಯಾಪ್ತಿಯ ಭದ್ರಾ ಹಿನ್ನೀರಿನ ತಟದಲ್ಲಿ 3ನೇ ವಷದ ಭೀಮನ ಅಮಾವಾಸ್ಯೆ ಪ್ರಯುಕ್ತ ಪಿತೃತರ್ಪಣ ಕಾರ್ಯಕ್ರಮ ನಡೆಯಿತು.

ಕೇರಳ ರಾಜ್ಯದ ಆಲ್ವಪುಣಪುರ ಎಂಬಲ್ಲಿ ಕೇರಳ ಸಂಪ್ರದಾಯದಂತೆ ಪ್ರತಿ ವಷರ್ ದೊಡ್ಡ ಮಟ್ಟದಲ್ಲಿ ಪಿತೃತರ್ಪಣ ಕಾರ್ಯಕ್ರಮ ನಡೆಯಲಿದೆ. ಕಳೆದ 3 ವರ್ಷದಿಂದ ಇಲ್ಲಿನ ಕೇರಳ ಹಿಂದು ಸಮಾಜದವರು ಈ ಸಂಪ್ರದಾಯವನ್ನು ಎನ್.ಆರ್.ಪುರದಲ್ಲಿ ಜಾರಿಗೆ ತಂದಿದ್ದಾರೆ. ಶೆಟ್ಟಿಕೊಪ್ಪ ಪುರೋಹಿತರಾದ ಸೌಂದರ್ಯ ರಾಜನ್ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕೇರಳ ಹಿಂದು ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪಿ.ಆರ್.ಸುಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶೋಕ್, ಉಪಾಧ್ಯಕ್ಷರಾದ ಸುಧಾಕರ ಆಚಾರ್, ಗಿರೀಶ್, ಸಹ ಕಾರ್ಯದಶಿಗಳಾದ ಪಿ.ಕೆ.ಸಜಿ,ಕೆ.ಕೆ.ಸಜಿ, ಖಜಾಂಚಿ ಮುರುಳೀಧರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net