ಪೊಲೀಸ್ ಸಾಮೂಹಿಕ ಓಟ

race
ಕೇರಳ ಪೊಲೀಸ್ ಅಧಿಕಾರಿಗಳ ಸಂಘಟನೆಯ ಸಾಮೂಹಿಕ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಚಾಲನೆ ನೀಡಿದರು.
Published on

ಕಾಸರಗೋಡು: ಕೇರಳ ಪೊಲೀಸ್ ಅಧಿಕಾರಿಗಳ ಸಂಘಟನೆ(ಕೆಪಿಒಎ) 34ನೇ ಜಿಲ್ಲಾ ಸಮ್ಮೇಳನ ಅಂಗವಾಗಿ ಸಾಮೂಹಿಕ ಓಟ ಸೋಮವಾರ ಕಾಸರಗೋಡಿನಲ್ಲಿ ನಡೆಯಿತು.

ಕಾಸರಗೋಡು ರೈಲ್ವೆ ನಿಲ್ದಾಣ ವಠಾರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಚಾಲನೆ ನೀಡಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಟಿ.ತಂಬಾನ್, ಕೆಪಿಎ ಜಿಲ್ಲಾಧ್ಯಕ್ಷ ಬಿ.ರಾಜಕುಮಾರ್, ರಾಜೀವನ್, ಕೆಪಿಒಎ ಜಿಲ್ಲಾ ಕಾರ್ಯದರ್ಶಿ ಪಿ.ರವೀಂದ್ರನ್, ಟಿ.ಗಿರೀಶ್ ಬಾಬು, ಎಂ.ಸದಾಶಿವನ್ ನೇತೃತ್ವ ನೀಡಿದ್ದರು. ನಗರದ ವಿವಿಧೆಡೆ ಸಂಚರಿಸಿ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಓಟ ಸಂಪನ್ನಗೊಂಡಿತು. ಜುಲೈ 13ರಂದು ಕೇರಳ ಪೊಲೀಸ್ ಅಧಿಕಾರಿಗಳ ಸಂಘಟನೆ 34ನೇ ಕಾಸರಗೋಡು ಜಿಲ್ಲಾ ಸಮ್ಮೇಳನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net