

ಮಡಿಕೇರಿ:
ಕೊಡಗಿನ ಅಮೂಲ್ಯ ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾಗುವ ಎರಡು ಪ್ರಮುಖ ಹೆದ್ದಾರಿಗಳ ನಿರ್ಮಾಣಕ್ಕೆ ಕೇರಳ ಮತ್ತೆ ಲಾಬಿ ಮುಂದುವರಿಸಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಯೋಜನೆ ಕಾರ್ಯಗತಗೊಳಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿದೆ. ಈ ಯೋಜನೆಗಳಿಗೆ ಈಗಾಗಲೇ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಲೆಕ್ಕಿಸದೇ ಪಕ್ಕದ ರಾಜ್ಯ ನಡೆಸುತ್ತಿರುವ ಮಸಲತ್ತಿಗೆ ಸ್ಥಳೀಯ ಕೆಲವರ ಒತ್ತಾಸೆ ಇರುವುದಾಗಿಯೂ ಹೇಳಲಾಗುತ್ತಿದೆ.
'ಮಡಿಕೇರಿ-ಭಾಗಮಂಡಲ-ಕರಿಕೆ-ಪಾಣತ್ತೂರು-ಕಾAಞAಗಾಡ್ ರಸ್ತೆಯನ್ನು ಭಾರತ್ ಮಾಲಾ ಯೋಜನೆ ಅಡಿಯಲ್ಲಿ ತಂದು ರಾಷ್ಟಿçÃಯ ಹೆದ್ದಾರಿಯಾಗಿ ಅಭಿವÊದ್ಧಿಪಡಿಸಲಾಗುವುದು', ಇಂಥ ಒಂದು ಭರವಸೆಯನ್ನು ಕೇರಳದ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅವರಿಗೆ ರಸ್ತೆ ಸಾರಿಗೆ ಮತ್ತು ರಾಷ್ಟಿçÃಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಕೊಟ್ಟಿದ್ದರು. ಮತ್ತೊಂದು ಕಡೆ 'ಮಡೈಕಾವು-ಪುಳಿಂಗೋಮ್- ತಲಕಾವೇರಿ' ರಸ್ತೆ ನಿರ್ಮಾಣದ ಯೋಜನೆ ಇದೆಯೇ?' ಎಂದು ಇದೇ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸತ್‌ನಲ್ಲಿ ಪ್ರಶ್ನೆ ಮಾಡುವ ಮೂಲಕ ಕೇರಳಿಗರ ಮನಸ್ಸಿನಲ್ಲಿ ಇರುವ ಮತ್ತೊಂದು ಯೋಜನೆಯನ್ನು ಬಹಿರಂಗಪಡಿಸಿದ್ದರು.
ಈ ಬಾರಿಯೂ ಕಾಸರಗೋಡಿನಲ್ಲಿ ಕಾಂಗ್ರೆಸ್ ಪಕ್ಷದ ರಾಜ್‌ಮೋಹನ್ ಉಣ್ಣಿತ್ತಾನ್ ಭಾರಿ ಬಹುಮತದಿಂದ ಪುನಾರಾಯ್ಕೆ ಆಗಿದ್ದಾರೆ. ಜತೆಗೆ ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಸರ್ಕಾರ ಇದೆ. ಹಾಗಾಗಿ ಕರ್ನಾಟಕದ ಮೂಲಕ ಹೆದ್ದಾರಿ ನಿರ್ಮಾಣದ ತಮ್ಮ ಬೇಡಿಕೆಗೆ ಕರ್ನಾಟಕ ಸರ್ಕಾರದಿಂದ ಪೂರಕ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿ ಈ ಬಾರಿಯೂ ತಮ್ಮ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಡಿಕೇರಿ-ಭಾಗಮಂಡಲ-ಕರಿಕೆ-ಪಾಣತ್ತೂರು-ಕಾAಞAಗಾಡ್ ಹೆದ್ದಾರಿಯನ್ನು ಭಾರತ್ ಮಾಲಾ ಯೋಜನೆ ಅಡಿಯಲ್ಲಿ ತಂದು ರಾಷ್ಟಿçÃಯ ಹೆದ್ದಾರಿಯಾಗಿ ಅಭಿವÊದ್ಧಿಪಡಿಸುವ ಭರವಸೆ ಸಂಸತ್‌ನ ಕಳೆದ ಅವಧಿಯಿಂದಲೂ ಹಾಗೆಯೇ ಉಳಿದುಕೊಂಡಿದೆ. ಇದಲ್ಲದೆ 'ಮಡೈಕಾವು-ಪುಳಿಂಗೋಮ್-ತಲಕಾವೇರಿ ರಸ್ತೆ ರಾಷ್ಟಿçÃಯ ಹೆದ್ದಾರಿ ಜಾಲದ ಭಾಗವಲ್ಲ. ಈ ರಸ್ತೆಯ ಅಭಿವÊದ್ಧಿಗೆ ಸಂಬAಧಿಸಿದAತೆ ಸಚಿವಾಲಯದ ಯಾವುದೇ ಯೋಜನೆ ಅಡಿಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ,' ಎಂದು ಸಚಿವ ಗಡ್ಕರಿ ಕಳೆದ ಬಾರಿ ಸಂಸತ್ ಅಧಿವೇಶನದಲ್ಲೇ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದರು. ಆದರೆ ಮತ್ತೆ ಸಂಸದರಾಗಿ ಗೆಲುವು ಸಾಧಿಸಿರುವ ರಾಜ್‌ಮೋಹನ್ ಉಣ್ಣಿತ್ತಾನ್ ತಮ್ಮ ಕ್ಷೇತ್ರದ ಮತದಾರರ ಆಕಾಂಕ್ಷೆಗೆ ಪೂರಕವಾಗಿ ಮತ್ತೆ ಕಾರ್ಯಾಚರಣೆಗೆ ಇಳಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಮಡೈಕಾವು-ಪುಳಿಂಗೋಮ್-ತಲಕಾವೇರಿ ರಸ್ತೆಗೆ ಸಂಬAಧಿಸಿದAತೆ ಕೇರಳಿಗರ ಬೇಡಿಕೆ ಹಿಂದೆ ದೊಡ್ಡ ಮಟ್ಟದ ದೂರಾಲೋಚನೆ ಅಲ್ಲಿನವರಿಗೆ ಇದೆ. ಕೇರಳದ ಕಣ್ಣೂರು ಜಿಲ್ಲೆಯ ಮಡೈಕಾವು, ಅಲ್ಲಿಂದ 42 ಕಿ.ಮೀ. ದೂರದಲ್ಲಿ ಪಶ್ಚಿಮಘಟ್ಟದಲ್ಲಿರುವ ಪುಳಿಂಗೋಮ್ ಹಾಗೂ ಇಲ್ಲಿಂದ ಪಾಣತ್ತೂರು, ಕರಿಕೆ ಮಾರ್ಗದಲ್ಲಿ ಹಾಲಿ ಇರುವ ರಸ್ತೆಯಲ್ಲಿ ತಲಕಾವೇರಿಗೆ 78 ಕಿಮೀ ದೂರ ಆಗುತ್ತದೆ. ಆದರೆ ಗ್ರೇಟರ್ ತಲಕಾವೇರಿ ನ್ಯಾಷನಲ್ ಪಾರ್ಕ್ ಮುಖಾಂತರ ಪ್ರಸ್ತಾವಿತ ಮಡೈಕಾವು-ಪುಳಿಂಗೋಮ್-ತಲಕಾವೇರಿ ಸಂಪರ್ಕ ಕಲ್ಪಿಸಿದರೆ ಶೇ.80ರಷ್ಟು ದೂರ ಕಡಿಮೆ ಆಗಲಿದೆ.
ತಮ್ಮ ಕ್ಷೇತ್ರದ ಜನತೆಯ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿರುವ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಈ ರಸ್ತೆ ಮಾರ್ಗದ ಪ್ರಸ್ತಾಪಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ 'ಈ ರಸ್ತೆ ನಿರ್ಮಾಣ ಆದರೆ ಕಣ್ಣೂರು ಜಿಲ್ಲೆಯಲ್ಲಿರುವ ಎಝಿಮಲ ನಾವೆಲ್ ಅಕಾಡೆಮಿ (ಇಂಡಿಯನ್ ನಾವೆಲ್ ಅಕಾಡೆಮಿ) ಮತ್ತು ಪೆರಂಗಾಮ್ ಸಿಆರ್‌ಪಿಎï ಕ್ಯಾಂಪ್ ಮಧ್ಯೆ ಸಂಪರ್ಕ ಸುಲಭವಾಗಲಿದೆ ಎನ್ನುವುದನ್ನೂ ಸಚಿವ ಗಡ್ಕರಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು.
ರಾಜ್‌ಮೋಹನ್ ಉಣ್ಣಿತ್ತಾನ್ ಪ್ರಸ್ತಾಪನೆಯ ಮಡೈಕಾವು-ಪುಳಿಂಗೋಮ್-ತಲಕಾವೇರಿ ಮಾರ್ಗದ ಪೈಕಿ ಪುಳಿಂಗೋಮ್‌ನಿAದ ತಲಕಾವೇರಿಗೆ ಕೇರಳ ಗಡಿಯ ಮುಂಡ್ರೋಟ್‌ನಿAದ ಕಚ್ಚಾ ರಸ್ತೆ ಇದೆ. ಗ್ರೇಟರ್ ತಲಕಾವೇರಿ ನ್ಯಾಷನಲ್ ಪಾರ್ಕ್ ಘೋಷಣೆಗೂ ಮೊದಲು ಈ ಕಚ್ಛಾ ರಸ್ತೆಯಲ್ಲಿ ತಲಕಾವೇರಿ - ಮುಂಡ್ರೋಟ್ ಮಧ್ಯೆ ಜೀಪ್‌ಗಳು ಓಡಾಡುತ್ತಿದ್ದವು. ಟ್ರಕ್ಕಿಂಗ್‌ಗೂ ಅವಕಾಶ ಇತ್ತು. ಆದರೆ ಈಗ ಈ ರಸ್ತೆಯಲ್ಲಿ ಸಂಚರಿಸುವುದನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ. ಒಂದು ವೇಳೆ ಮಡೈಕಾವು-ಪುಳಿಂಗೋಮ್-ತಲಕಾವೇರಿ ರಸ್ತೆ ಯೋಜನೆ ಕಾರ್ಯರೂಪಕ್ಕೆ ಬಂದರೆ ಗ್ರೇಟರ್ ತಲಕಾವೇರಿ ನ್ಯಾಷನಲ್ ಪಾರ್ಕ್ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎನ್ನುವುದು ಪರಿಸರವಾದಿಗಳ ಆತಂಕ.
ಇಲ್ಲಿ ರಸ್ತೆ ನಿರ್ಮಾಣವಾದರೆ ಭಾರಿ ಪ್ರಮಾಣದಲ್ಲಿ ಅರಣ್ಯನಾಶ ಉಂಟಾಗಲಿದೆ. ಇಲ್ಲಿಯೇ ಇರುವ ಬ್ರಹ್ಮಗಿರಿ ಶ್ರೇಣಿಯಲ್ಲಿ ಉಗಮಿಸುವ ಜೀವನದಿ ಕಾವೇರಿಯ ಅಸ್ತಿತ್ವಕ್ಕೂ ಧಕ್ಕೆ ಬರುವ ಸಾಧ್ಯತೆ ಇದೆ. ಬಂಡೀಪುರ, ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಒಳಗೆ ಹೆದ್ದಾರಿ ಹಾದು ಹೋಗಿರುವುದರಿಂದ ಆಗುತ್ತಿರುವ ಅನಾಹುತಗಳು ಇಲ್ಲೂ ಮರುಕಳಿಸಲಿದೆ. ಇದಲ್ಲದೆ ಆಗಾಗ್ಗೆ ಭೂಕುಸಿತಕ್ಕೆ ಸಾಕ್ಷಿಯಾಗುತ್ತಿರುವ ಪಶ್ಚಿಮಘಟ್ಟ ಶ್ರೇಣಿ ಮೇಲೆ ಮತ್ತಷ್ಟು ಪರೋP್ಷÀ ಪರಿಣಾಮಗಳು ಆಗುವ ಸಾಧ್ಯತೆಗಳ ಬಗ್ಗೆಯೂ ಪರಿಸರ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದು ಕಡೆ ಮಡಿಕೇರಿ-ಭಾಗಮಂಡಲ-ಕರಿಕೆ-ಪಾಣತ್ತೂರು-ಕಾAಞAಗಾಡ್ ರಸ್ತೆಯನ್ನು ಭಾರತ್ ಮಾಲಾ ಯೋಜನೆ ಅಡಿಯಲ್ಲಿ ರಾಷ್ಟಿçÃಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೂ ಒತ್ತಡ ಹೇರಲು ಕಾಸರಗೋಡು ಸಂಸದ ಸಿದ್ಧತೆ ನಡೆಸಿದ್ದಾರೆ. ಇದು ದಶಕಗಳಿಂದ ಕಳಪೆ ರಸ್ತೆಯಲ್ಲಿ ನರಕದ ಅನುಭವ ಪಡೆಯುತ್ತಿರುವ ಜಿಲ್ಲೆಯ ಗಡಿ ಗ್ರಾಮ ಕರಿಕೆ ಗ್ರಾಮಸ್ಥರಿಗೆ ಖುಷಿ ಕೊಡುವ ಸುದ್ದಿಯಾದರೂ ಪರಿಸರಕ್ಕೆ ಮಾರಕ ಯೋಜನೆ ಆಗಿದೆ.
ಭಾಗಮಂಡಲ-ಕರಿಕೆ ನಡುವಿನ 33 ಕಿಮೀ ರಸ್ತೆ ತಲಕಾವೇರಿ ವನ್ಯ ಜೀವಿ ವಲಯದ ದಟ್ಟ ಕಾಡೊಳಗೆ ಹಾದು ಹೋಗುತ್ತದೆ. ರಸ್ತೆಯ ಒಂದು ಬದಿಯಲ್ಲಿ ಜಲಪಾತಗಳ ದರ್ಶನವಾದರೆ ಮತ್ತೊಂದು ಕಡೆಯಲ್ಲಿ ಹಸಿರು ಹೊದ್ದಿರುವ ಕಾಡು, ಬೆಟ್ಟ-ಗುಡ್ಡಗಳು ಕಾಣಸಿಗುತ್ತದೆ. ಇಂತಹ ಜಾಗದಲ್ಲಿ ರಾಷ್ಟಿçÃಯ ಹೆದ್ದಾರಿ ನಿರ್ಮಾಣಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವನ್ಯಜೀವಿ ವಲಯದಲ್ಲಿ ಹೆದ್ದಾರಿ ವಿಸ್ತರಣೆ ಅಷ್ಟು ಸುಲಭವಲ್ಲ. ಪರಿಸರಕ್ಕೆ ಸಂಬAಧಿಸಿದ ಸಂಸ್ಥೆಗಳಿAದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಈ ಸಂಬAಧ ಹಲವು ಪ್ರಕರಣಗಳು ನ್ಯಾಯಾಲಯದಲ್ಲೂ ಇದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಜಿಲ್ಲೆಯ ಪರಿಸರಕ್ಕೆ ಹಾನಿ ಮಾಡುವ ದೊಡ್ಡ ಯೋಜನೆಗಳು ಕೊಡಗಿಗೆ ಬೇಡ. ಈಗಿರುವ ರಸ್ತೆಗಳ ಗುಣಮಟ್ಟ ಉತ್ತಮಪಡಿಸಿದರೆ ಸಾಕು. ಅಪಾಯಕಾರಿ ಯೋಜನೆಗಳಿಗೆ ಖರ್ಚು ಮಾಡುವ ಅನುದಾನದ ಕಾಲು ಭಾಗ ಉಪಯೋಗಿಸಿದರೂ ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾಗಿಯೇ ಕೆಲಸಗಳನ್ನು ಮಾಡಬಹುದು.