ಸೋಮವಾರ ಕೆಂಜಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ ಮಹಾ ರಥೋತ್ಸವ

23-ANP-P1 KENJAGAPURA GOD
Published on

ಆನಂದಪುರ: ಸಮೀಪದ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಾ.25ರಂದು ನಡೆಯಲಿದೆ. ರಥೋತ್ಸವದ ನಿಮಿತ್ತ ಮಾ.24ರಿಂದ 26ರವರೆಗೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.

ಮಾ.24ರ ಬೆಳಗ್ಗೆ 6ಕ್ಕೆ ಷಟ್‌ಸ್ಥಲ ಧ್ವಜಾರೋಹಣ, ಶತ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಉಪನ್ಯಾಸಕ ಡಾ. ರತ್ನಾಕರ ಕುನಗೋಡು ಉಪನ್ಯಾಸ ನೀಡಲಿದ್ದಾರೆ. 1.30ಕ್ಕೆ ಮಹಾ ದಾಸೋಹ, ಸಂಜೆ 4ಕ್ಕೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಮಾ.25ರಂದು ಬೆಳಗ್ಗೆ 6ಕ್ಕೆ ರುದ್ರಾಭಿಷೇಕ ಮತ್ತು ಅಷ್ಟೋತ್ತರ ಸೇವೆ ನಡೆಯಲಿದೆ. 7.30ಕ್ಕೆ ಮಹಾರಥೋತ್ಸವ ನೆರವೇರಲಿದೆ. 10 ಗಂಟೆಗೆ ಕೋಣಂದೂರಿನ ಬೃಹನ್ ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ರಿಪ್ಪನ್‌ಪೇಟೆಯ ಪ್ರಣತಿ ಅಣ್ಣಪ್ಪ, ಕಟ್ಟೆಹಕ್ಕಲು ಸುಧಾಕರ ಮತ್ತು ಶಿರಾಳಕೊಪ್ಪದ ಸಂಗೀತ ಶಿಕ್ಷಕ ಎಂ.ಜಿ.ಮಲ್ಲಿಕಾರ್ಜುನ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 12.30ಕ್ಕೆ ಮಹಾ ದಾಸೋಹ ಹಮ್ಮಿಕೊಳ್ಳಲಾಗಿದೆ. ಮಾ.26ರಂದು ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಕಂಕಣ ವಿಸರ್ಜನೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net