ಕೇಣಿ ಬಂದರು ವಿರೋಧಿಸಿ 4 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆ

Keni port public hearing
Published on

ಕಾರವಾರ/ಅಂಕೋಲಾ: ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಸಂಬಂಧ ಶುಕ್ರವಾರ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಅಹವಾಲು ಸಭೆಯಲ್ಲಿ ಬಂದರು ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಕೇಣಿ ಹಾಗೂ ಸುತ್ತಲಿನ 4 ಸಾವಿರಕ್ಕೂ ಅಽಕ ಜನ ಲಿಖಿತವಾಗಿ ಹಾಗೂ ಮೌಖಿಕವಾಗಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದರು. ಆದರೆ, ಯೋಜನೆಯ ಪರವಾಗಿ ಧ್ವನಿಯೇ ಇರಲಿಲ್ಲ.

ಅಂಕೋಲಾ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಪರಿಸರ ಇಲಾಖೆ ಅಽಕಾರಿಗಳು ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಜೆಎಸ್‌ಡಬ್ಲು ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೇಷ್ಮಾ ಉಲ್ಲಾಳ ಯೋಜನೆಯ ಬಗ್ಗೆ ವಿವರ ನೀಡಿದರು. ನಂತರ ಸಾರ್ವಜನಿಕರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಎಸ್‌ಪಿ ದೀಪನ್ ಎಂ.ಎನ್.ಅವರ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಸಭಾಭವನದ ಒಳಗೆ 800 ಕ್ಕೂ ಅಧಿಕ ಆಸನಗಳು ಭರ್ತಿಯಾಗಿದ್ದವು. 50 ಕ್ಕೂ ಅಧಿಕ ಜನ ಮಾತನಾಡಿ ತಮ್ಮ ಆಕ್ಷೇಪಣೆ ಸಲ್ಲಿಸಿದರೆ, 4300 ಜನ ತಮ್ಮ ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸಿದರು. ಹೊರಗೆ ಸಾವಿರಾರು ಜನ ಸಾಲಿನಲ್ಲಿ ಬಂದು ತಮ್ಮ ಆಕ್ಷೇಪಣೆ ಸಲ್ಲಿಸಿದರು. ಬೆಳಗ್ಗೆ 9.30 ಕ್ಕೆ ಸರಿಯಾಗಿ ಆರಂಭವಾದ ಸಭೆ ರಾತ್ರಿ 7.30 ರವರೆಗೂ ಮುಂದುವರಿದಿತ್ತು. ನೂರಾರು ಮಹಿಳೆಯರು ಊಟಕ್ಕೂ ತೆರಳದೇ ಬವನದಲ್ಲೇ ಕೂತು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಪರಿಸರ ವಿಜ್ಞಾನಿ ಡಾ.ವಿ.ಎನ್.ನಾಯಕ, ಇಐಎ ವರದಿಯ ತಪ್ಪುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net