ಕೇಣಿ ಖಾಸಗಿ ಬಂದರು ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ

Keni Meeting
Published on

ಅಂಕೋಲಾ: ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಕಾನೂನಾತ್ಮಕ ಹೋರಾಟ ನಡೆಸಲು ಕೇಣಿ ವಾಣಿಜ್ಯ ಬಂದ ರು ವಿರೋಧಿ ಹೋರಾಟ ಸಮಿತಿಯವರು ಕೋಟೆವಾಡದ ನಾಮಧಾರಿ ನೌಕರರ ಸಂಘದ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ ಸರ್ವಸಮಾಜದ ನಾಗರಿಕರ ಆಪ್ತ ಸಮಾಲೋಚನಾ ಸಭೆಯಲ್ಲಿ ಶಾಸಕ ಸತೀಶ ಸೈಲ್ ಮತ್ತು ಎಂಎಲ್‌ಸಿ ಗಣಪತಿ ಉಳ್ವೇಕರ ಅಧ್ಯಕ್ಷತೆಯಲ್ಲಿ ಹೋರಾಟ ನಡೆಸಲು ಅಗತ್ಯ ರೂಪುರೇಷೆ ಸಿದ್ಧಪಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಶಾಸಕ ಸತೀಶ ಸೈಲ್ ಅವರು ಮಾತನಾಡಿ ಸರ್ವ ಸಮುದಾಯದವರು ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಹೋರಾಟದ ರೂಪರೇಷೆಗಳನ್ನು ಸಿದ್ಧ ಪಡಿಸಿ ಕೊಂಡು ಮುಂದಿನ ಹೋರಾಟ ಕೈಗೊಳ್ಳಬೇಕಾಗಿದೆ. ಸರ್ವೆ ಹಾಗೂ ನಿರ್ಮಾಣ ಕಾಮಗಾರಿ ತಡೆಯಲು ಹಲವು ರೀತಿಯ ಮಾರ್ಗಗಳಿವೆ. ಕ್ಷೇತ್ರದ ಜನರಿಗೆ ಸಮಸ್ಯೆ ಆಗುವ ಯೋಜನೆಗೆ ಬೆಂಬಲವಿಲ್ಲ ಎಂದರು.

ವಿಪ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ವಾಣಿಜ್ಯ ಬಂದರು ನಿರ್ಮಾಣದ ಸ್ಥಾಪನೆಗೆ ಸಂಪೂರ್ಣ ವಿರೋಧವಿದೆ. ಈ ಯೋಜನೆ ಯಾವುದೇ ಮುನ್ಸೂಚನೆ ನೀಡದೇ ಬಂದರು ಇಲಾಖೆ ತನ್ನ ಸರ್ವೆ ಕಾರ್ಯ ಪ್ರಾರಂಭಿಸಿದೆ. ಈ ಎಲ್ಲಾ ನಡುವಳಿಕೆ ಮೀನುಗಾರಿಕೆಗೆ ಅಡ್ಡಿಯಾಗಿದೆ. ಕೂಡಲೇ ಯೋಜನೆ ಕೈಬಿಡಿ ಪೊಲೀಸ್ ಶಕ್ತಿ ಪ್ರದರ್ಶನದಂತೆ, ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದರು.

ಪ್ರಮುಖರಾದ ಗೋಪಾಲ ಕೃಷ್ಣ ನಾಯಕ ಅಗಸೂರು ಮಾತನಾಡಿ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ ಮೀನುಗಾರರು ಮಾತ್ರವಲ್ಲದೆ, ಸುತ್ತಮುತ್ತಲಿನ ಎಲ್ಲ ಸಮುದಾಯದ ಜನರು ತಮ್ಮ ಜಮೀನನ್ನು ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚಿನದಾಗಿದ್ದು, ಎಲ್ಲರೂ ಒಟ್ಟಾಗಿ ಬಂದರು ನಿರ್ಮಾಣವಾ ಗದಂತೆ ಹೋರಾಟ ಮಾಡಬೇಕು ಎಂದರು. ಜಿಲ್ಲಾ ಬಿಜೆಪಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ ಅಧಿಕಾರಿಗಳು ಬಡ ಮೀನುಗಾರರ ಮೇಲೆ ಅಧಿಕಾರ ಪ್ರಯೋಗಿಸಿ ದಬ್ಬಾಳಿಕೆ ಮಾಡುತ್ತಿ ರುವುದು ಸರಿಯಲ್ಲ ಎಂದರು.

ಪ್ರಮುಖರಾದ ಗಣಪತಿ ಮಾಂಗ್ರೆ ಕಾರವಾರ, ಸಂದೀಪ ಬಂಟ, ಶ್ರೀಕಾಂತ ದುರ್ಗೇಕರ್, ಅರುಣ ನಾಡ ಕರ್ಣಿ, ಭಾಸ್ಕರ ನಾರ್ವೇಕರ್, ಸುಜಾತಾ ಗಾಂವಕರ, ಮಹೇಶ ಗೌಡ, ವೆಂಕಟೇಶ ತಾಂಡೇಲ, ಉದಯ ನಾಯಕ ಸೇರಿದಂತೆ ಹಲರು ಮಾತನಾಡಿದರು.

ಸಂಸದರಿಗೆ ಮನವಿ : ಯಾರದೇ ಜೀವನಕ್ಕೂ ತೊಂದರೆ ಕೊಡಬೇಕೆನ್ನುವುದು ಯಾರಿಗೂ ಇರುವುದಿಲ್ಲ. ಆದರೆ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಅನೇಕ ರೀತಿಯ ಗೊಂದಲಗಲ್ಲಿಗೆ ಕಾರಣವಾಗು ತ್ತದೆ. ತಾವು ನೀಡಿದ ಮನವಿಯಲ್ಲಿರುವ ವಿಷಯದ ಕುರಿತು ಸಂಬAಧಪಟ್ಟ ಅಧಿಕಾರಿಗಗಳಿಂದ ಮಾಹಿತಿ ತರಿಸಿಕೊಂಡು ನಿಮ್ಮ ಬಳಿ ಪುನಃ ಬರುತ್ತೇನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಾನು ಕೂಡ ಧ್ವನಿಗೂಡಿಸಿ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ವ್ಯಕ್ತಪಡಿ ಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ, ಸಂಸದ ಗಣಪತಿ ಉಳ್ವೇಕರ್, ಪ್ರಮುಖ ರಾದ ರಾಜೇಂದ್ರ ನಾಯ್ಕ, ಗಣಪತಿ ಮಾಂಗ್ರೆ, ಭಾಸ್ಕರ ನಾರ್ವೇಕರ, ವೆಂಕಟೇಶ ತಾಂಡೇಲ, ಹೂವಾ ಖಂಡೇಕರ್, ಶ್ರೀಕಾಂತ ದುರ್ಗೇಕರ್, ರಾಜು ಟಿ.ಹರಿಕಂತ್ರ, ರಾಜೇಶ್ವರಿ ಕೇಣಿಕರ್, ಸರಿತಾ ಬಲೇಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net