

ಆಲ್ದೂರು: ಹೊಸಳ್ಳಿ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಕೆಂಡೋತ್ಸವ ನಡೆಯಿತು.
ಶುಕ್ರವಾರ ಸಂಜೆ ದೇವಸ್ಥಾನದಲ್ಲಿ ಅಂಬು ಹೊಡೆಯಲಾಯಿತು. ರಾತ್ರಿ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆದವು.
ಶನಿವಾರ ಬೆಳಗ್ಗೆ ಸ್ವಾಮಿಗೆ ಕುಂಕುಮ ಅಲಂಕಾರ ವಿಶೇಷ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಕೆಂಡೋತ್ಸವ ನಡೆಯಿತು. ಊರಿನ ಗ್ರಾಮಸ್ಥರು ದೇವರ ಉತ್ಸವಮೂರ್ತಿಗಳನ್ನು ಹೊತ್ತು ವಾದ್ಯಕ್ಕೆ ತಕ್ಕಂತೆ ಹೆಜ್ಜೆಹಾಕಿದರು. ಆಲ್ದೂರು, ಹವ್ವಳಿ, ಗುಡ್ಡದೂರು, ಮಾಗರವಳ್ಳಿ, ಕಣತಿ, ಮಾಗೋಡು, ಅರೇನೂರು, ಹಕ್ಕಿಮಕ್ಕಿ, ಕುಂಬಾರಹಳ್ಳಿ, ಹಳೇ ಆಲ್ದೂರು, ಕಬ್ಬಿಣ ಸೇತುವೆ, ಶಿರವಳಲು, ಮಡೇನೆರ‌್ಲು, ಬೈಗೂರು, ಹಂಗರವಳ್ಳಿ, ಕಠಾರದಳ್ಳಿ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಮನೆಯ ದೇವರಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ದೇವಸ್ಥಾನ ಸಮಿತಿ ಕಾರ್ಯದರ್ಶಿ ಇಂದ್ರೇಶ್, ಚಂದ್ರಪ್ಪ, ವಿಜಯ್‌ಕುಮಾರ್, ಪರಮೇಶ್ ಇದ್ದರು.