ಕೆಂಡ ಹಾಯ್ದ ಭಕ್ತರು

oplus_0
oplus_0
Published on

ಬೆಲಹೊಂಗಲ: ಪಟ್ಟಣ ಸೇರಿ ತಾಲೂಕಾದ್ಯಂತ ಭಾನುವಾರ ಯಾವುದೇ ತಾರತಮ್ಯವಿಲ್ಲದೆ ಸರ್ವಧಮೀರ್ಯರು ಸಂಭ್ರಮದಿಂದ ಮೊಹರಂ ಹಬ್ಬ ಆಚರಿಸಿದರು.

ಮೊಹರಂ ನತ್ಯದ ಸೊಬಗು, ಗಾಯನ ಎಲ್ಲರನ್ನು ರಂಜಿಸಿತು. ಡೋಲಿಗಳ ಮೆರವಣಿಗೆ ಶ್ರದ್ಧೆ, ಭಕ್ತಿಯಿಂದ ನಡೆಯಿತು. ತುಂತುರುಮಳೆ ನಡುವೆಯೂ ಹಿಂದು&ಮುಸ್ಲಿಮರು ಒಗ್ಗಟ್ಟಾಗಿ ಹಬ್ಬ ಆಚರಿಸಿದರು.

ಭಕ್ತರು ಬಾರಕೋಲಿನಿಂದ ಹೊಡೆದುಕೊಳ್ಳುವುದು ನೋಡುಗರ ಮೆ ರೋಮಾಂಚನಗೊಳಿಸಿತು. ಡಿಜೆ ನಾದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಡಿವೆಎಸ್ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ ನೇತತ್ವದಲ್ಲಿ ಪೊಲೀಸರು ರಕ್ಷಣೆ ಒದಗಿಸಿದರು. ಒಟ್ಟು 11 ಕಡೆ ಡೋಲಿ ಪ್ರತಿಷ್ಠಾಪಿಸಲಾಗಿತ್ತು.

ಕೆಂಡ ಹಾಯ್ದ ಭಕ್ತರು: ಮಳೆರಾಯ ತುಸು ಬಿಡುವು ನೀಡಿದ್ದರಿಂದ ಹಬ್ಬದ ಸಡಗರ, ಸಂಭ್ರಮ ಹೆಚ್ಚಿತ್ತು. ಎಲ್ಲ ಕಡೆ ಭಕ್ತರು ಭಕ್ತಿ ಪರವಶರಾಗಿ ಕೆಂಡ ಹಾಯ್ದರು. ಹೆಣ್ಣು ಮಕ್ಕಳು, ಪುರುಷರು, ಯುವಕರು, ಯುವತಿಯರು, ಮಹಿಳೆಯರು ಮಕ್ಕಳನ್ನು ಹೊತ್ತುಕೊಂಡು ಕೆಂಡ ಹಾಯ್ದರು. ಡೋಲಿಗಳ ಮೆರವಣಿಗೆ ನೆರೆದವರನ್ನು ಆಕರ್ಷಿತು. ಎಲ್ಲ ಡೋಲಿಗಳು ಭಟ್ಟನ ಕೂಟದಲ್ಲಿ ಒಂದೆಡೆ ಸೇರಿ ಒಗ್ಗಟ್ಟಿನಿಂದ ಹಬ್ಬದ ಆಚರಣೆ ಯಶಸ್ವಿಗೊಳಿಸಲಾಯಿತು.

ಸಂಜೆ ಆಗುತ್ತಲೇ ಡೋಲಿಗಳು ನದಿಗೆ ತೆರಳಿದವು. ಡೋಲಿಗಳ ಹಿರಿಯರು, ಮುಖಂಡರು, ಯುವಕರು ಹಬ್ಬ ಶಾಂತಿಯುತವಾಗಿ ಆಚರಿಸಲು ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net