ಕೆಂಚಮ್ಮ ಬಯಲಿನ ಅರಣ್ಯಕ್ಕೆ ಬೆಂಕಿ

SRI fire
ಕಲ್ಕಟ್ಟೆ ಸಮೀಪದ ಕೆಂಚಮ್ಮ ಬಯಲಿನ ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡಿರುವುದು.
Published on

ಶೃಂಗೇರಿ: ಕಲ್ಕಟ್ಟೆ ಶ್ರೀ ರಾಘವೇಂದ ಸ್ವಾಮಿ ಬೃಂದಾವನದಿಂದ ಅರ್ಧ ಕಿಮೀ ದೂರದಲ್ಲಿರುವ ಕೆಂಚಮ್ಮ ಬಯಲಿನ ಹೊಳೆಕರಾಬು ಜಾಗದಲ್ಲಿ ಗುರುವಾರ ಮಧ್ಯಾಹ್ನ ಬೆಂಕಿಹೊತ್ತಿಕೊಂಡು ಸುಮಾರು ಒಂದು ಎಕರೆ ಅರಣ್ಯ ನಾಶವಾಗಿದೆ. ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ಅರಣ್ಯದ ಸಮೀಪ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿ ಇದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಯಾರೋ ಅಡುಗೆ ಮಾಡುತ್ತಿದ್ದು ಬೆಂಕಿ ಹೊತ್ತಿಕೊಂಡಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾದರೆ, ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅರಣ್ಯದ ನಡುವೆ ಇರುವ ಸಾಕಷ್ಟು ಪೊದೆ, ಕಾಡು ಗಿಡಗಳು ಸುಟ್ಟು ಕರಕಲಾಗಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅಶೋಕ್ ತಿಳಿಸಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಬೆಂಕಿ ಹೊತ್ತಿಕೊಂಡಾಗ ಅಗ್ನಿ ಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು. ಪಕ್ಕದಲ್ಲಿದ್ದ ನರ್ಸರಿಗೆ ಯಾವುದೇ ಹಾನಿ ಆಗಿಲ್ಲ. ಒಂದು ಎಕರೆಯಷ್ಟು ಅರಣ್ಯನಾಶವಾಗಿದ್ದು, ಪೊದೆಗಳು ಸುಟ್ಟುಹೋಗಿವೆ ಎಂದು ಪ್ರತ್ಯಕ್ಷದರ್ಶಿ ವಿಜಯವಾಣಿ ವಿತರಕ ಕಲ್ಕಟ್ಟೆ ಆನಂದಸ್ವಾಮಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net