ಕೆಂಪೇಗೌಡರ ದೂರದೃಷ್ಟಿ ಸ್ಮರಣೀಯ

SRP_28-01jpj
ಪಟ್ಟಣ ಸಮೀಪದ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಿಸಲಾಯಿತು. ಆರ್.ಆದರ್ಶ, ಭಾನುಪ್ರಿಯಾ, ಎಸ್.ಪಿ.ನಮ್ರತಾ, ಕೆ.ಎಸ್.ರಾಘವೇಂದ್ರ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಕೆರೆ-ಕಟ್ಟೆಗಳ ನಿರ್ಮಣದ ಮೂಲಕ ನಾಗರಿಕತೆ ಅಸ್ತಿತ್ವ ಕಟ್ಟಿಕೊಟ್ಟ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಆಡಳಿತ ಪ್ರಜ್ಞೆಗೆ ಸಾಕ್ಷಿ ಎಂದು ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಆದರ್ಶ ತಿಳಿಸಿದರು.


ಪಟ್ಟಣ ಸಮೀಪದ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸರ್ವಜನಾಂಗದ ಶಾಂತಿಯ ತೋಟ ಎಂಬ ರಾಷ್ಟ್ರಕವಿ ಕುವೆಂಪು ಅವರ ಬಣ್ಣನೆಯನ್ನು 500 ವರ್ಷಗಳ ಹಿಂದೆಯೇ ತಮ್ಮ ಗುಣ, ನಡೆಗಳಲ್ಲಿ ಅಳವಡಿಸಿಕೊಂಡ ಕಾರಣದಿಂದಲೇ ವಿವಿಧ ಧರ್ಮ, ಜಾತಿ, ವರ್ಗಗಳ ಬೇಧವಿಲ್ಲದೆ ವರ್ತಕರು, ಶ್ರಮಿಕರು ಮತ್ತು ರೈತಾಪಿ ಜನರಿಗೆ ಸಾವಿರ ಕೆರೆಗಳನ್ನು, ಕೋಟೆ, ಕೊತ್ತಲ ಕಟ್ಟಿಸಿ ರಕ್ಷಣೆಯ ಜತೆಗೆ ಆಶ್ರಯ ನೀಡಿರುವ ಬೆಂಗಳೂರನ್ನು ಕಟ್ಟಿದರು ಎಂದು. ಸ್ಮರಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಭಾನುಪ್ರಿಯಾ, ಮ್ಯಾನೇಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಪ್ರಾಂಶುಪಾಲ ಕೆ.ಎಸ್.ರಾಘವೇಂದ್ರ, ಸಂಧ್ಯಾ, ಎಸ್.ಪಿ.ಸ್ಪಂದನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net