ಕೆಂಪೇಗೌಡರ ಆದರ್ಶ ಅನುಸರಿಸೋಣ

HNP- 3 Kempe G
???????
Published on
  • ಹೊಳೆನರಸೀಪುರ : ಕೆಂಪೇಗೌಡರ ಆದರ್ಶ, ಆಡಳಿತ ವಿಧಾನಗಳನ್ನು ಅನುಸರಿಸೋಣ ಎಂದು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಹೇಳಿದರು.
  • ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಅವರು ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ದೂರದೃಷ್ಠಿಯಿಂದ ಬೆಂಗಳೂರು ಪ್ರಾಂತ್ಯದಲ್ಲಿ ಸಾವಿರಾರು ಕೆರೆ ನಿರ್ಮಾಣವಾದವು. ಆದರೆ ಇಂದು ಸ್ವಾರ್ಥ ಹೆಚ್ಚಾದ ಸಂದರ್ಭದಲ್ಲಿ ಅವೆಲ್ಲವೂ ಒತ್ತುವರಿಯಾಗಿವೆ. ರಾಜಕಾರಣ, ಪ್ರಭಾವ, ಭೂ ಒಡೆತನದ ಹಪಾಹಪಿಗಳು ಈ ದುಸ್ಥಿತಿಗೆ ಕಾರಣವಾಗಿವೆ. ಕೆರೆ, ಕಟ್ಟೆಗಳ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾದರೆ ಪ್ರಭಾವಿಗಳ ಹಲವು ಫೋನ್ ಕರೆಗೆ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
  • ಜಲ ಸಂಪನ್ಮೂಲಗಳ ರಕ್ಷಣೆಗಾಗಿ ನಾವು ಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ಕಂದಾಯ ಇಲಾಖೆಯೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜನರು ಮತ್ತು ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕು ಎಂದು ಅವರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net