

ಚಿಕ್ಕಮಗಳೂರು: ನಮ್ಮಂತೆ ಎಲ್ಲರೂ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟವರು ಕೆಂಪೇಗೌಡರು. ಹೀಗಾಗಿ ಆವರನ್ನು ಜಾತ್ಯಾತೀತ ತತ್ವದ ಅಡಿಯಲ್ಲೇ ನೋಡಬೇಕು ಎಂದು ಬಾಣಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದೊರೇಶ್ ಬಿಳಿಕೆರೆ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಾಗುರು ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಮಹಾರಾಜ ಕೆಂಪೇಗೌಡ, ಮಹಾ ಕವಿ ಕುವೆಂಪು ಅವರನ್ನು ನಾಡಿಗೆ ನೀಡಿರುವ ಒಕ್ಕಲಿಗ ಸಮುದಾಯ ಶ್ರೇಷ್ಟ ಪರಂಪರೆ ಹೊಂದಿದೆ. ಜಯಂತಿಗಳ ಮೂಲ ಉz್ದೆÃಶ ನಮ್ಮನ್ನು ನಾವು ಅರಿಯಲು ಹಾಗೂ ಚರಿತ್ರೆಯನ್ನು ತಿಳಿದುಕೊಳ್ಳಲು ಎಂದು ಹೇಳಿದರು.
ವಿಶ್ವಮಾನವ ಪ್ರಜ್ಞೆ ಕೆಂಪೇಗೌಡರಲ್ಲಿ ಇತ್ತು. ಒಂದು ರಾಜಧಾನಿ ಭದ್ರವಾಗಿ ಇರಬೇಕಾದರೆ ಅಲ್ಲಿ ಏನೆಲ್ಲಾ ಇರಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ಹಾಗಾಗಿ ಆಗಿನ ಕಾಲದಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡಿದರು. ವ್ಯಾಪಾರ ವಹಿವಾಟಿಗೂ ಅವಕಾಶ ನೀಡಿದ್ದರು. ಹೀಗೆ ಎಲ್ಲ ಸಮುದಾಯದವರಿಗೆ ಸಮಾನ ಅವಕಾಶವನ್ನು ನೀಡಿದ್ದರು. ರೈತರು, ಬಡವರು, ಶ್ರೀಮಂತರೆAಬ ಬೇಧವನ್ನು ಮಾಡುತ್ತಿರಲಿಲ್ಲ ಎಂದು ಹೇಳಿದರು.
ಇಂದು ಬೆಂಗಳೂರು ಇಡೀ ಪ್ರಪಂಚ ಗುರುತಿಸುವ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಮೂಲ ಕಾರಣ ಕೆಂಪೇಗೌಡ ಎಂಬುದನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಈಗಿನ ಮಾಲ್ ಸಂಸ್ಕೃತಿ ಹುಟ್ಟಿದ್ದು ಕೆಂಪೇಗೌಡರ ಕಾಲದಲ್ಲಿ. ಜಾತಿ, ಧರ್ಮ, ವರ್ಣದ ಹೆಸರಿನಲ್ಲಿ ಅವರ ಕಾಲದಲ್ಲಿ ತಾರತಮ್ಯ ಮಾಡುತ್ತಿರಲಿಲ್ಲ. ಹೀಗಾಗಿಯೇ ಇಂದಿಗೂ ಬೆಂಗಳೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ತಿಳಿಸಿದರು.
ಕೋಟೆ, ಪೇಟೆ, ಕೆರೆ, ಗುಡಿ, ಗುರಿ ಅವರ ಪರಿಕಲ್ಪನೆಯಾಗಿತ್ತು. ಒಂದು ನಗರ ಇದೇ ಮಾದರಿಯಲ್ಲಿ ಇರಬೇಕೆಂಬುದು ಅವರ ಆಶಯವಾಗಿತ್ತು. ಇಂತಹ ಕಾರ್ಯಕ್ರಮಗಳು ತೋರ್ಪಡೆಗೆ ಇರಬಾರದು. ಬದಲಿಗೆ ಆದರ್ಶ ವೇದಿಕೆಯಾಗಬೇಕು. ಕೆಂಪೇಗೌಡರ ಆದರ್ಶ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚರಿತ್ರೆ, ದಂತ ಕಥೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ನಾಡಪ್ರಭು ಕೆಂಪೇಗೌಡ ಅವರು ದೂರ ದೃಷ್ಟಿಯ ನಾಯಕರು. ಬೆಂಗಳೂರು ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಕಾರಣ ಕೆಂಪೇಗೌಡರ ದೂರ ದೃಷ್ಟಿಕೋನ. ಅದೇ ಮಾದರಿಯಲ್ಲಿ ರಾಜ್ಯದ ಇತರೆ ಜಿಲ್ಲೆಗಳು ಬೆಳೆಯಬೇಕು ಎಂದು ತಿಳಿಸಿದರು.
ಮಹಾತ್ಮರ ಜಯಂತಿಯನ್ನು ಆಚರಿಸುವ ಉz್ದÉÃಶ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು ಎನ್ನುವುದಾಗಿದೆ. ಮಹಾತ್ಮರ ಆದರ್ಶಗಳನ್ನು ಮಕ್ಕಳಿಗೆ, ಸಾರ್ವಜನಿಕರಿಗೆ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಮಕ್ಕಳು ಇತಿಹಾಸ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎಸ್ಪಿ ವಿಕ್ರಮ್ ಅಮಟೆ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು.