ಕೆಂಪೇಗೌಡರ ನಾಯಕತ್ವ ಯುವಪೀಳಿಗೆಗೆ ಮಾದರಿ : ಶಾಸಕ ಹರೀಶ್ ಪೂಂಜ ಅಭಿಮತ

New Project (21)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜಾಗತೀಕ ಮಟ್ಟದಲ್ಲಿ ಬೆಂಗಳೂರು ಪ್ರಸಿದ್ಧಿಯಾಗಿದ್ದು, ಇದು ಕೆಂಪೇಗೌಡರ ಶ್ರಮದ ಫಲವಾಗಿದೆ. ಅವರ ಕಾರ್ಯವೈಖರಿ, ನಾಯಕತ್ವ ಎಂದೆಂದಿಗೂ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣೆ ಸಮಿತಿ ವತಿಯಿಂದ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ತಾಲೂಕು ಒಕ್ಕಲಿಗರ ಗೌಡರ ಸಂಘ, ತಾಲೂಕು ಒಕ್ಕಲಿಗರ ಗೌಡರ ಸೇವಾ ಟ್ರಸ್ಟ್, ಒಕ್ಕಲಿಗ ಗೌಡರ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಹಯೋಗದಲ್ಲಿ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಾಗ್ಮಿ ಡಾ.ಮಹಾವೀರ ಜೈನ್ ಇಚ್ಲಂಪಾಡಿ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಶುಭಹಾರೈಸಿದರು. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಎ.ಪಿ.ಶ್ರೀನಾಥ್, ತಹಸೀಲ್ದಾರ್ ಪಥ್ವಿ ಸಾನಿಕಂ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಕುಶಾಲಪ್ಪ ಗೌಡ ಪೂವಾಜೆ, ಬಾಲಕಷ್ಣ ಗೌಡ, ಮೋಹನ್ ಗೌಡ ಕಲ್ಮಂಜ, ಅಧಿಕಾರಿಗಳು ಉಪಸ್ಥಿತರಿದ್ದರು. ಜೋಸೆಫ್ ಎನ್.ಎಂ. ಸ್ವಾಗತಿಸಿದರು. ಜಯಾನಂದ ವಂದಿಸಿದರು. ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ವಿಜೇತರಿಗೆ ಗೌರವಾರ್ಪಣೆ

ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವೇಣೂರಿನ ಶರತ್, ಪುಂಜಾಲಕಟ್ಟೆಯ ಭೂಷಣ್ ದ್ವಿತೀಯ ಸ್ಥಾನ ಪಡೆದರು. ಲಾಯಿಲದ ವಿ.ತನೂಶ್ ರೈ, ಬೆಳ್ತಂಗಡಿಯ ರಿಧೂ, ಶೇಕ್ ಮಹಮದ್ ಶಿಯಾನ್ ತತೀಯ ಸ್ಥಾನ ಪಡೆದಿದ್ದು, ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net