ಕೆಂಪೇಗೌಡ ಜಯಂತಿ ಆಚರಣೆಗೆ ಒಕ್ಕಲಿಗರು ನಿರ್ಧಾರ

SRP_17-02jpj
Published on

ಶ್ರೀರಂಗಪಟ್ಟಣ : ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ.27ರಂದು ಒಗ್ಗಟ್ಟಿನಿಂದ ಅರ್ಥಪೂರ್ಣವಾಗಿ ಆಚರಿಸಲು ಒಕ್ಕಲಿಗ ಸಮುದಾಯದ ಮುಖಂಡರು ತೀರ್ಮಾನಿಸಿದ್ದಾರೆ. ಪಟ್ಟಣದ ಯುವಜನ ಕ್ರೀಡಾ ಇಲಾಖೆಯ ತೆರದ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಜನಪ್ರತಿನಿಧಿಗಳು, ಮುಖಂಡರು ಚರ್ಚಿಸಿದರು. ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ನಾಯಕರೇ ಈವರೆಗೂ ಶಾಸಕರಾಗಿ ಅಧಿಕಾರ ನಡೆಸುತ್ತಿದ್ದರೂ ಸಮುದಾಯದ ದನಿಗೆ ಬೆಂಬಲಿಸಲಿಲ್ಲ. ತಾಲೂಕು ಕೇಂದ್ರದಲ್ಲಿ ಒಕ್ಕಲಿಗರ ಭವನ ನಿರ್ಮಿಸಲಿಲ್ಲ. ಇದು ನೋವಿನ ಸಂಗತಿ ಎಂದರು.
ಮೊದಲು ಎಲ್ಲಾ ಪ್ರತಿಷ್ಠೆ ಹಾಗೂ ಭಿನ್ನಾಭಿಪ್ರಾಯಗಳನ್ನು ನಮ್ಮ ನಮ್ಮಲ್ಲಿ ಮರೆತು ಒಂದುಗೂಡಿ, ಯಾವುದೇ ಪಕ್ಷಭೇದವಿಲ್ಲದೆ ಸಮುದಾಯದ ಅಭಿವೃದ್ಧಿ ಮತ್ತು ನ್ಯಾಯಯುತ ಸೌಲಭ್ಯಗಳನ್ನು ಪಡೆಯಲು ಒಂದಾಗೋಣ ಎಂದರು.
ಶಾಸಕರನ್ನು ಸಾಮೂಹಿಕವಾಗಿ ಭೇಟಿ ಮಾಡಿ ಸಮುದಾಯದ ಮನವಿ ಸಲ್ಲಿಸೋಣ. ನಾಡಿಗೆ ಕೆಂಪೇಗೌಡರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಜಯಂತಿಯನ್ನು ಮಾದರಿಯಾಗಿ ಆಚರಿಸೋಣ ಎಂದು ತಿಳಿಸಿದರು. ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಕೃಷ್ಣಪ್ಪ, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ರುಕ್ಮಾಂಗದ ಹಾಗೂ ದರಸಕುಪ್ಪೆ ಮಂಜುನಾಥ್ ಮಾತನಾಡಿದರು.
ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಗೌಡಹಳ್ಳಿ ದೇವರಾಜು, ಉಪಾಧ್ಯಕ್ಷ ದರಸಕುಪ್ಪೆ ಲೋಕೇಶ್, ಮುಖಂಡರಾದ ವಡಿಯಾಂಡಳ್ಳಿ ನಾಗರಾಜು, ಉದಯ್ ಕುಮಾರ್, ಕಿರಂಗೂರು ವಿಜಯಣ್ಣ, ಟೆಂಟ್ ಸುರೇಶ್, ಹಿಂದು ಜಾಗರಣ ವೇದಿಕೆ ಚಂದನ್, ಸುಧಾಕರ್, ಮಾಜಿ ಪುರಸಭಾ ಸದಸ್ಯ, ಸುನೀಲ್, ಲಕ್ಷ್ಮೀನಾರಾಯಣ, ಬಿಜೆಪಿ ಸುಧಾಕರ್, ಆನಂದ್, ನೆಲಮನೆ ಅನೀಲ್, ರಾಂಪುರ ವಿಜಯೇಂದ್ರ ಪುಟ್ಟು, ಕೂಡಲಕುಪ್ಪೆ ತಮ್ಮೇಗೌಡ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net