ಬೆಂಗಳೂರು ಹೆಸರು ಮಾಡಲಿ ಕೆಂಪೇಗೌಡರು ಕಾರಣ

27HDK06
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಎಚ್.ಡಿ.ಕೋಟೆ : ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕೆಂಪೇಗೌಡರು ಕಾರಣ ಎಂದು ತಹಸೀಲ್ದಾರ್ ಶ್ರೀನಿವಾಸ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಗುರುವಾರ ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಬೆಂಗಳೂರು ನಗರ ಮೂಲ ಕಾರಣಕರ್ತರು ಕೆಂಪೇಗೌಡರು. ಕೆಂಪೇಗೌಡರು ವಾಣಿಜ್ಯ ನಗರದ ಸೃಷ್ಟಿ ಕರ್ತರು, ನೀರಿನ ಸಮಸ್ಯೆ ಬರಬಾರದು ಎಂದು ದೂರದೃಷ್ಟಿ ಇಟ್ಟುಕೊಂಡು ಕೆರೆ ನಿರ್ಮಾಣ ಮಾಡಿದ್ದರು. ಎಲ್ಲ ವರ್ಗದ ಜನರಿಗೆ ಸಮಾನತೆ ಕಲ್ಪಿಸಿದರು. ಬೆಂಗಳೂರು ಕರ್ನಾಟಕದ ರಾಜ್ಯಧಾನಿ ಆಗಲು ಕೆಂಪೇಗೌಡರು ಕಾರಣ ಎಂದರು.


ಶಿಕ್ಷಕ ಆನಂದ್ ಮಾತನಾಡಿ, ಒಂದು ದೇಶ ಕಟ್ಟಲು ಪರಾಕ್ರಮ ಒಂದರಿಂದಲೇ ಸಾಧ್ಯವಿಲ್ಲ. ತ್ಯಾಗ ಬಲಿದಾನ ಕೂಡ ಮುಖ್ಯ. ಅದನ್ನು ಕೆಂಪೇಗೌಡರ ಆಡಳಿತವನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ನಿರ್ಮಾಣವಾದ ರಾಜಕಾಲುವೆ, ಕೆರೆಗಳು ಇಂದು ನಾಪತ್ತೆ ಆಗಿದೆ. ಹಾಗಾಗಿ ಮಳೆಯಾದರೆ ಅತಿವೃಷ್ಟಿ, ಇಲ್ಲದಿದ್ದರೆ ಅನಾವೃಷ್ಟಿ ಆಗಲು ಕಾರಣ ಆಗಿದೆ ಎಂದರು.


ಮುಖಂಡ ಕೃಷ್ಣೇಗೌಡ ಮಾತನಾಡಿ, ಕೆಂಪೇಗೌಡರು ಬೆಂಗಳೂರಿನಲ್ಲಿ 68 ಪೇಟೆಗಳನ್ನು ಅಂದೇ ನಿರ್ಮಾಣ ಮಾಡಿದರು. ಕುಡಿಯುವ ನೀರಿಗಾಗಿ 150 ಕೆರೆಗಳನ್ನು ನಿರ್ಮಾಣ ಮಾಡಿದ್ದರು ಎಂದು ಸ್ಮರಿಸಿದರು.


ಕಾರ್ಯಕ್ರಮದಲ್ಲಿ ಮುಖಂಡರಾದ ಹಿರೇಹಳ್ಳಿ ಸೋಮೇಶ್, ನರಸಿಂಹೇಗೌಡ, ಕೃಷ್ಣೇಗೌಡ, ಸಣ್ಣರಾಮಪ್ಪ, ಹೊ.ಕೆ.ಮಹೇಂದ್ರ, ನಾಗನಾಯಕ, ಡ್ರಿಫ್ ಗುರುಸ್ವಾಮಿ, ಚಲುವರಾಜು, ಇಒ ಧರಣೀಶ್, ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್, ಅಂಗಡಿ ಸತೀಶ್, ವಕೀಲ ನಿಂಗರಾಜು, ಮಹಾದೇವಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಜಿವಿಕ ಬಸವರಾಜು, ಸುರೇಂದ್ರ ಗೌಡ, ಸ್ವಾಮಿ ಚಿಕ್ಕಣ್ಣೇಗೌಡ, ರಾಮ ಪ್ರಸಾದ್, ಶಿಕ್ಷಕ ಆನಂದ್, ಬಸವರಾಜು, ಉಮೇಶ್, ರವಿ, ನವೀನ್, ಸಾಗರೆ ಮಹೇಂದ್ರ, ವೇದಕುಮಾರ್, ಸಿದ್ದರಾಜು, ಬಸವರಾಜು, ದಿಲೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net