ಮೈಸೂರು: ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಅವರ 515ನೇ ವರ್ಷದ ಜಯಂತಿ ಅಂಗವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕೆಂಪೇಗೌಡ ಅವರ ಚಿತ್ರ ಹಾಗೂ ರಂಗೋಲಿ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
ಜೂ.27ರಂದು ಬೆಳಗ್ಗೆ 9 ಗಂಟೆಗೆ ಕಲಾಮಂದಿರದ ಆವರಣದಲ್ಲಿ ಮಹಿಳೆಯರು ಹಾಗೂ 18 ವರ್ಷದೊಳಗಿನ ವಯೋಮಿತಿ ಎರಡು ವಿಭಾಗದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ನಗದು ಬಹುಮಾನ, ಪಾರಿತೋಷಕ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಹುಮಾನ ನೀಡಲಾಗುವುದು.
ಆಸಕ್ತರು ಜೂ.26 ರೊಳಗೆ ತಮ್ಮ ಹೆಸರನ್ನು ಸುಶೀಲಾ ನಂಜಪ್ಪ ಮೊ.9964450069 ಅಥವಾ ಯಮುನಾ ಮೊ.9902698623 ಅವರನ್ನು ಸಂಪರ್ಕಿಸಲು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಪಡುವಾರಹಳ್ಳಿಯ ಸಿ.ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.