ಕೆಂಪಯ್ಯನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘ ಆಯ್ಕೆ

ಕೆಂಪಯ್ಯನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಮುದ್ದೇಗೌಡ, ಉಪಾಧ್ಯಕ್ಷರಾಗಿ ರವಿಕುಮಾರ್  ಅವಿರೋಧವಾಗಿ ಆಯ್ಕೆಯಾದರು. ಎಂ.ಮಹದೇವಣ್ಣ, ಆನಂದ್, ಮಾಧು, ನಾಗೇಗೌಡ, ಶಿವಮೂರ್ತಿ, ಗಿರೀಶ್, ಸಿದ್ದಪ್ಪ, ಪುಟ್ಟಣ್ಣ, ಲೋಕೇಶ್, ನಾಗೇಶ್ ಇತರರು ಇದ್ದರು.
ಕೆಂಪಯ್ಯನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಮುದ್ದೇಗೌಡ, ಉಪಾಧ್ಯಕ್ಷರಾಗಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಎಂ.ಮಹದೇವಣ್ಣ, ಆನಂದ್, ಮಾಧು, ನಾಗೇಗೌಡ, ಶಿವಮೂರ್ತಿ, ಗಿರೀಶ್, ಸಿದ್ದಪ್ಪ, ಪುಟ್ಟಣ್ಣ, ಲೋಕೇಶ್, ನಾಗೇಶ್ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕಿನ ಕೆಂಪಯ್ಯನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಮುದ್ದೇಗೌಡ(ರಮೇಶ್) ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಮುದ್ದೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹಸೀನಾ ಅಧಿಕೃತವಾಗಿ ಘೋಷಣೆ ಮಾಡಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ರಮೇಶ್, ಕೆ.ರಘು, ಕೆ.ಪಿ.ಸುರೇಶ್, ಗಿರೀಶ್, ಗವಿಗೌಡ, ಹೊಂಬಾಳಮ್ಮ, ಸಣ್ಣಮ್ಮ, ವೆಂಕಟೇಶ್ ಹಾಜರಿದ್ದು ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು.

ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ, ಮಾರ್ಗದರ್ಶನದೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಪಿ ಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪಯ್ಯನಹುಂಡಿ ಎಂ.ಮಹದೇವಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್, ಗುತ್ತಿಗೆದಾರ ಮಾಧು, ನಾಗೇಗೌಡ, ಶಿವಮೂರ್ತಿ, ಗಿರೀಶ್, ಸಿದ್ದಪ್ಪ, ಪುಟ್ಟಣ್ಣ, ಲೋಕೇಶ್, ನಾಗೇಶ್, ಗಣೇಶ್, ಸಂದೀಪ್, ಅರುಣ್, ಮೂರ್ತಿ, ಗಂಗಾಧರ್, ಸುರೇಶ್, ಸಂಘದ ಕಾರ್ಯದರ್ಶಿ ಮಂಜುಳಾ, ಸಹಾಯಕ ವಿನಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net