

ಪಂಚನಹಳ್ಳಿ: ಕಡೂರು ತಾಲೂಕಿನ ಕುಂದೂರು ಗ್ರಾಮದ ಶ್ರೀ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಸೋಮವಾರದಿಂದ ಪ್ರಾರಂಭವಾದ ಜಾತ್ರಾ ಮಹೋತ್ಸವಕ್ಕೆ ಗುರುವಾರ ಮಧ್ಯಾಹ್ನ ರಥೋತ್ಸವದೊಂದಿಗೆ ತೆರೆ ಬಿದ್ದಿತು.
ರಥೋತ್ಸವದ ನಿಮಿತ್ತ ಕೆಂಪಮ್ಮ ದೇವಿ, ಮರುಳಸಿದ್ದೇಶ್ವರ ಸ್ವಾಮಿ, ಕೋಡಿಲಕ್ಕಮ್ಮ ದೇವಿಗೆ ವಿಶೇಷ ಅಲಂಕಾರ ನೆರವೇರಿಸಿ ಉತ್ಸವ ನಡೆಸಲಾಯಿತು. ಹರಕೆ ಹೊತ್ತಿದ್ದ ಭಕ್ತರು ಪಾನಕದ ಎತ್ತಿನಗಾಡಿಗಳನ್ನು ದೇವಸ್ಥಾನದ ಸುತ್ತು ಪ್ರದಕ್ಷಿಣೆ ಹಾಕಿಸಿದರು. ಇನ್ನು ಹಲವರು ಉರುಳು ಸೇವೆ ನೆರವೇರಿಸಿ ಹರಕೆ ತೀರಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.