ಘಟನೆಗೆ ಕುಡಿಯುವ ನೀರೇ ಕಾರಣ

30 kem 1
ಯಕ್ತಾಪುರದ ಕಸ್ತೂರಬಾ ವಸತಿ ನಿಲಯ ಮಕ್ಕಳು ಶನಿವಾರ ಅಸ್ವಸ್ಥರಾಗಿರುವುದಕ್ಕೆ ಸಂಬAಧಿಸಿದAತೆ ನೀರಿನ ಟ್ಯಾಂಕರ್ ಅನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಪರಿಶೀಲಿಸಿದರು. ಡಾ.ಸಂಜಯ ಇದ್ದರು.
Published on

ಕೆಂಭಾವಿ: ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ಶಾಲೆಯಲ್ಲಿ ಶನಿವಾರ ಚಹಾ, ಬಿಸ್ಕಿಟ್ ಸೇವಿಸಿದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದಕ್ಕೆ ಕುಡಿಯುವ ನೀರೇ ಕಾರಣ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ ಸ್ಪಷ್ಟಪಡಿಸಿದರು.

ನಾನೇ ವೈದ್ಯಕೀಯ ತಂಡದ ಜತೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಖ್ಯವಾಗಿ ಅಲ್ಲಿ ನೀರಿನ ಸಮಸ್ಯೆ ಇದೆ. ಬೊಮ್ಮನಹಳ್ಳಿ (ಎಂ) ಗ್ರಾಮದ ತೆರೆದ ಬಾವಿಯೊಂದರಿಂದ ಶಾಲೆಗೆ ನೀರು ಪೂರೈಸಲಾಗುತ್ತಿದೆ. ನೀರನ್ನು ಪರೀಕ್ಷಾ ಘಟಕಕ್ಕೆ ಕಳಿಸಲಾಗಿದ್ದು, ಸೋಮವಾರ ವರದಿ ಬರಲಿದೆ. ಈಗಾಗಲೇ ತಾಲೂಕಿನಲ್ಲಿ ತೆರೆದ ಬಾವಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ತಾಂತ್ರಿಕ ತಜ್ಞರು ಹೇಳಿದ್ದಾರೆ. ಟ್ಯಾಂಕರ್ ಮೂಲಕ ತಂದ ನೀರನ್ನು ಸಿಂಟೆಕ್ಸ್ ಟ್ಯಾಂಕ್‌ನಲ್ಲಿ ಶೇಖರಿಸಿದ್ದರಿಂದ ದುರ್ವಾಸನೆ ಬೀರುವುದನ್ನು ಖುದ್ದಾಗಿ ಗಮನಿಸಿದ್ದು, ಮೇಲಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಅಸ್ವಸ್ಥ ವಿದ್ಯಾರ್ಥಿನಿಯರು ಯಕ್ತಾಪುರ ಪಿಎಚ್‌ಸಿ ಮತ್ತು ಕೆಂಭಾವಿ ಸಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ ಮತ್ತು ಡಾ.ಸಂಜಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net