ಗ್ರಾಮೀಣ ರಸ್ತೆ ಸುಧಾರಣೆಗೆ ವಿಶೇಷ ಅನುದಾನ

16 kem 1
ಹೆಗ್ಗಣದೊಡ್ಡಿ ಗ್ರಾಮಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಮಾನಪ್ಪ ಸೂಗೂರ, ಗೋವಿಂದಪ್ಪ ದೊರಿ, ಪಿಡ್ಡಪ್ಪ ದೊರಿ, ಮಡಿವಾಳಪ್ಪ ಪಾಟೀಲ್, ಪ್ರೇಮಿಬಾಯಿ ಇತರರಿದ್ದರು.
Published on

ಕೆಂಭಾವಿ: ಪ್ರತಿಯೊಂದು ಗ್ರಾಮಗಳಿಗೆ ಅನುದಾನ ಒದಗಿಸಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಕಾಮಗಾರಿ ಬೇಗ ಮುಗಿಸುವಂತೆ ತಾಕೀತು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಹೆಗ್ಗಣದೊಡ್ಡಿಗೆ ಸೋಮವಾರ ಭೇಟಿ ನೀಡಿ ಗ್ರಾಮದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಸಚಿವರು, ಗ್ರಾಮೀಣ ರಸ್ತೆ ಸುಧಾರಣೆಗೆ ವಿಶೇಷ ಅನುದಾನ ನೀಡಲಾಗಿದೆ. ಕುಡಿಯುವ ನೀರಿಗೆ ಹಣ ಬಿಡುಗಡೆಯಾಗಿದ್ದು, ಹಲವು ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಚಾಲನೆಯಲ್ಲಿದೆ. ಸಮುದಾಯ ಭವನ, ಸರ್ಕಾರಿ ಕಟ್ಟಡ, ಶಾಲಾ ಕೋಣೆ ನಿರ್ಮಾಣ ಸೇರಿ ಇನ್ನುಳಿದ ಸಾರ್ವಜನಿಕ ಕೆಲಸಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಗ್ರಾಮದ ಧರ್ಮರ ಮಠದ ಯಾತ್ರಿ ನಿವಾಸ, ವಾಲ್ಮೀಕಿ ಸಮುದಾಯ ಭವನ, ಆಸ್ಪತ್ರೆ ಕಟ್ಟಡ, ಶಾಲಾ ಕೋಣೆಗಳ ನಿರ್ಮಾಣ ಹಂತದ ಕಾಮಗಾರಿ ವೀಕ್ಷಿಸಿದರು.

ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್, ಗ್ರಾಪಂ ಅಧ್ಯಕ್ಷ ಮಾಳಪ್ಪ ಗೋಸಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಮುಖಂಡರಾದ ಮಾನಪ್ಪ ಸೂಗೂರ, ಗೋವಿಂದಪ್ಪ ದೊರಿ, ಪಿಡ್ಡಪ್ಪ ದೊರಿ, ಮಡಿವಾಳಪ್ಪ ಪಾಟೀಲ್, ಪ್ರೇಮಿಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net