ಅನಧಿಕೃತ ಪಟಾಕಿ ಮಾರಾಟ ಮಾಡಬೇಡಿ

04 kem 1
ಕೆಂಭಾವಿಯಲ್ಲಿ ಶನಿವಾರ ತಹಸೀಲ್ದಾರ್ ವಿಜಯಕುಮಾರ ಪಟಾಕಿ ಮಾರಾಟಕ್ಕೆ ಸ್ಥಳ ಪರೀಶೀಲಿಸಿದರು. ಕಂದಾಯ ನಿರೀಕ್ಷಕ ರಾಜೇಸಾಬ್, ಪುರಸಭೆ ಅಧಿಕಾರಿ ಮುಜಾಹಿದ್ದಿನ್, ಸಿದ್ರಾಮಯ್ಯ ಇಂಡಿ ಇದ್ದರು.
Published on

ಕೆಂಭಾವಿ: ಪಟಾಕಿ ದುರಂತದ ಬಳಿಕ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದ್ದು, ನಿಗದಿಪಡಿಸಿದ ಸ್ಥಳದಲ್ಲೇ ಪಟಾಕಿ ಮಾರಾಟ ಮಾಡಬೇಕೆಂಬ ನಿಯಮ ವಿಧಿಸಿದೆ ಎಂದು ತಹಸೀಲ್ದಾರ್ ವಿಜಯಕುಮಾರ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪಟಾಕಿ ಮಾರಾಟ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ವ್ಯಾಪಾರಸ್ಥರಿಂದ ಪಟಾಕಿ ಮಾರಾಟಕ್ಕೆ ಅರ್ಜಿಗಳು ಬಂದಿದ್ದು, ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಸುರಕ್ಷಿತ ಮತ್ತು ಜನರಹಿತ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ವ್ಯಾಪಾರಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಪ್ರದೇಶದ ಸ್ಥಳವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ತಿಳಿಸಿದರು.

ಕಂದಾಯ ನಿರೀಕ್ಷಕ ರಾಜೇಸಾಬ್, ಪುರಸಭೆ ಅಧಿಕಾರಿ ಮುಜಾಹಿದ್ದಿನ್, ಸಿದ್ರಾಮಯ್ಯ ಇಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net