ಕೆಳಗೋಟೆಯಲ್ಲಿ ಚೌಡಮ್ಮ ದೇವಿ ಮೆರವಣಿಗೆ

15 JLR
Published on

ಜಗಳೂರು: ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಗುರುವಾರ ಭರತ ಹುಣ್ಣಿಮೆ ಪ್ರಯುಕ್ತ ಚೌಡಮ್ಮ ದೇವಿ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.

ಪ್ರತಿ ವರ್ಷ ಸುಗ್ಗಿಕಾಲ ಮುಗಿದ ಬಳಿಕ ಬರುವ ಭರತ ಹುಣ್ಣಿಮೆಗೆ ಐನಹಳ್ಳಿ ಗ್ರಾಮದೇವತೆ ಚೌಡಮ್ಮ ದೇವಿಯು ಕೆಳಗೋಟೆ ಗ್ರಾಮಕ್ಕೆ ಆಗಮಿಸುವುದು ವಾಡಿಕೆ. ಗ್ರಾಮಕ್ಕೆ ಆಗಮಿಸಿದ ತಾಯಿಯನ್ನು ಭಕ್ತರು ಎದುರುಗೊಂಡು ಪೂಜೆ ಸಲ್ಲಿಸಿ, ಉರುಮೆ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಿಯನ್ನು ಮಾರಮ್ಮ ದೇವಸ್ಥಾನ ಮುಂಭಾಗದಲ್ಲಿ ಕೂರಿಸಿದರು.

ರಾತ್ರಿ ಭಜನೆ, ಹಾಸ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಮುಂಜಾನೆ 5 ಗಂಟೆಗೆ ಮೆರವಣಿಗೆಯ ಮೂಲಕ ಪಕ್ಕದ ಕಣುಕುಪ್ಪೆ ಗ್ರಾಮಕ್ಕೆ ದೇವಿಯನ್ನು ಕಳಿಸಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net