

ತಾಳಿಕೋಟೆ: ಪಟ್ಟಣದ ಎಸ್.ಎಸ್. ವಿದ್ಯಾಸಂಸ್ಥೆಯ ಎಚ್.ಎಸ್.ಪಾಟೀಲ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಕೀರ್ತಿ ಲ.ಹಜೇರಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟೆಯ ಅಕ್ಕಮಹಾದೇವಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯ ಆಶ್ರಯದಲ್ಲಿ ಜರುಗಿದ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಯುನಿವರ್ಸಿಟಿ ಬ್ಲೂ ಆಗಿದ್ದಾರೆ.
ಚೆನ್ನೈ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ, ಕಾರ್ಯದರ್ಶಿ ಸಚಿನ ಎಚ್. ಪಾಟೀಲ, ಆಡಳಿತಾಧಿಕಾರಿ ಕಿರಣ ಎಚ್.ಪಾಟೀಲ, ಸದಸ್ಯರಾದ ರವಿ ಬಿ.ಪಾಟೀಲ, ಪ್ರಾಚಾರ್ಯರಾದ ಡಾ.ಎಚ್.ಬಿ. ನಡುವಿನಕೇರಿ, ಶಿವಕುಮಾರ ನಾಯಕ, ಉಪನ್ಯಾಸಕರಾದ ಗಾಯತ್ರಿ ಪತ್ತಾರ, ಸುರೇಶ ಪಾಟೀಲ, ಆರ್.ಆರ್. ಬಡಗಣ, ಪಿ.ಎಂ.ಚಲವಾದಿ, ಎಂ.ಎಸ್.ರಾಯಗೊಂಡ, ವಾಣಿಶ್ರೀ ಬೀಳಗಿ, ಬಿ.ಐ.ಹಿರೇಹೊಳಿ, ಎಚ್.ಬಿ.ಪಾಟೀಲ, ಎಸ್.ವಿ.ಜಾಮಗೊಂಡಿ, ಎಸ್.ಬಿ.ಸಾಸನೂರ, ಎಸ್.ಬಿ.ಮಂಗ್ಯಾಳ, ಶರಣಯ್ಯ ಹಿರೇಮಠ, ಸಂಸ್ಥೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.