

ಹೊಸಕೋಟೆ : ದಿನದಿಂದ ದಿನಕ್ಕೆ ವಾತಾವರಣ ಕಲುಷಿತವಾಗುತಿದ್ದು, ಮನುಷ್ಯ ಆಯೋಗ್ಯವಂತ ಜೀವನ ನೆಡೆಸುವುದು ಕಷ್ಟಕರವಾಗುತ್ತಿದೆ. ಆದುದರಿಂದ ಪ್ರತಿಯೊಬ್ಬ ನಾಗರಿಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಸಲಹೆ ನೀಡಿದರು.
ನಗರದ ವಕೀಲರ ಸಂದದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ವಕೀಲರ ಸಂದಿಂದ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಸತೀಶ್, ಮನೆಯ ಶೌಚಗೃಹದಿಂದ ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಅನೇಕ ಕಾಯಿಲೆಗಳಿಂದ ರಸಿಕೊಳ್ಳಬಹುದು. ಮನೆ ವಾತಾವರಣ ಸ್ವಚ್ಛತೆಗೆಂದೇ ವಾರದಲ್ಲಿ ಒಂದು ದಿನ ಮೀಸಲಿಡಬೇಕು ಎಂದರು.
ವಕೀಲರ ಸಂದ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ಪ್ರತಿ ದಿನ ನ್ಯಾಯಾಲಯಕ್ಕೆ ಬರುವ ಸಾವಿರಾರು ಕದಾರರು ಶೌಚಗೃಹವಿಲ್ಲದೆ ಪರದಾಡುವಂತಾಗಿತ್ತು. ಈಗ ಶೌಚಗೃಹ ರಿಪೇರಿಗೆ ಸಂಬಂಧಿತ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದು, ಸ್ವಚ್ಛತಾ ಕಾರ್ಯಕ್ಕೆ ಸಂದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಲವೇ ದಿನಗಳಲ್ಲಿ ಶೌಚಗೃಹ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಶಿಲ್ಪಾಶ್ರೀ, ವಕೀಲರ ಸಂದ ಉಪಾಧ್ಯಕ್ಷ ರವಿ, ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್, ಖಜಾಂಚಿ ರುಕ್ಮಿಣಿ, ಹಿರಿಯ ವಕೀಲರಾದ ಹನುಮಂತ ರಾವ್, ನಾಗರಾಜ್ ಇದ್ದರು.