ಗುರಿ ಮುಟ್ಟಲು ಪ್ರಯತ್ನ ಮುಂದುವರಿಸಿ

biz expo
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಉದ್ಯಮಶೀಲತೆಯ ಪ್ರಯಾಣದಲ್ಲಿ ಸವಾಲುಗಳು ಅನಿವಾರ್ಯ ಭಾಗವಾಗಿದ್ದು, ಇದರ ನಡುವೆಯೂ ಗುರಿ ಮುಟ್ಟಲು ಪ್ರಯತ್ನ ನಿರಂತರವಾಗಿರಬೇಕು ಎಂದು ಕರ್ನಾಟಕ ಕನ್ವೇಯರ್ಸ್ ಆಂಡ್ ಸಿಸ್ಟಮ್್ಸ ಪ್ರೖೆವೇಟ್ ಲಿಮಿಟೆಡ್ ಎಂಡಿ ಮಹಾದೇವ ಕರಮರಿ ಕರೆ ನೀಡಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಬಿಜಿನೆಸ್ ನೆಟವರ್ಕ್ ಇಂಟರ್​ನ್ಯಾಷನಲ್ (ಬಿಎನ್​ಐ) ಆಯೋಜಿಸಿದ್ದ ಬಿಜ್ ಎಕ್ಸ್​ಫೋ ಉದ್ಘಾಟಿಸಿ ಮಾತನಾಡಿದ ಅವರು, ಮಾರ್ಕೆಟಿಂಗ್ ಎಂಬುದು ಯಾವುದೇ ವ್ಯವಹಾರದ ಕಠಿಣ ಕ್ಷೇತ್ರವಾಗಿದೆ. ಬಿಎನ್​ಐ ನಂಥ ವೇದಿಕೆಗಳು ಮತ್ತು ಈ ಪ್ರದರ್ಶನಗಳು ತಮ್ಮ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತದೆ ಎಂದರು.

ಒಂದು ನಿರ್ದಿಷ್ಟ ಉದ್ಯಮಕ್ಕೆ ಸಂಬಂಧಿಸಿದಂತೆ ಪ್ರದರ್ಶನವನ್ನು ನಡೆಸಲಾಗುತ್ತದೆ. ಆದರೆ, ಬಿಜ್ ಎಕ್ಸ್​ಪೋದಲ್ಲಿ ವಿವಿಧ ವಲಯದ ಕೈಗಾರಿಕೆಗಳು ಪಾಲ್ಗೊಂಡಿರುವುದು ಗಮನಾರ್ಹ ಎಂದು ಹೇಳಿದರು.

ಬಿಎನ್​ಐ ಹುಬ್ಬಳ್ಳಿ-ಧಾರವಾಡ ಕಾರ್ಯನಿರ್ವಾಹಕ ನಿರ್ದೇಶಕ ಶ್ರೇಯಸ್ ನಾಡಕರ್ಣಿ, ಮೊದಲ ಬಿಎನ್​ಐ ಬಿಜ್ ಎಕ್ಸ್​ಫೋ ಅಪಾರ ಯಶಸ್ಸು ಕಂಡಿದೆ ಎಂದರು.

ಬಿಜ್ ಎಕ್ಸ್​ಪೋದಲ್ಲಿ ಶಿಕ್ಷಣ, ಐಟಿ, ಟ್ರಾವೆಲ್, ಉತ್ಪಾದನೆ, ನಿರ್ವಣ, ಬ್ಯೂಟಿ ಸಲೂನ್ ಸೇರಿ ವಿವಿಧ ಉದ್ಯಮದ 35 ಮಳಿಗೆಗಳು ಇದ್ದವು. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹೈದರಾಬಾದ್, ಗೋವಾದಿಂದ ಉದ್ಯಮಿಗಳು ಪಾಲ್ಗೊಂಡಿದ್ದರು. ವಿಜಯ ಮಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net