

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಚುನಾವಣಾ ಅಭ್ಯಥಿರ್ಗಳ ಖರ್ಚು&ವೆಚ್ಚದ ಮೇಲೆ ನಿತ್ಯವೂ ತೀವ್ರ ನಿಗಾವಹಿಸುವಂತೆ ಚುನಾವಣಾ ವೆಚ್ಚ ವೀಕ ಭೂಷಣ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣಾ ಖರ್ಚು&ವೆಚ್ಚ ನಿಗಾ ತಂಡದ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಂದಗೋಳ, ಹುಬ್ಬಳ್ಳಿ ಪಶ್ಚಿಮ, ಕಲಟಗಿ ಹಾಗೂ ಶಿಗ್ಗಾಂವಿ ೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದ ಅಧಿಕಾರಿಗಳು ನಿತ್ಯ ವರದಿ ಸಲ್ಲಿಸಬೇಕು ಎಂದರು.
ಚುನಾವಣಾ ಅಭ್ಯಥಿರ್ಗಳ ದಿನದ ಕಾರ್ಯಕ್ರಮ, ಸಮಾರಂಭಗಳ ಚಟುವಟಿಕೆಗಳನ್ನು ಸರಿಯಾಗಿ ದಾಖಲಿಸಿಕೊಳ್ಳುವಂತೆ ಹಾಗೂ ವಿಡಿಯೋ ರೆಕಾಡಿರ್ಂಗ್ ಸಹ ಮಾಡುವಂತೆ ವಿಎಸ್ಟಿ, ಎಸ್ಎಸ್ಟಿ, ವಿವಿಟಿ ತಂಡಗಳಿಗೆ, ಸಹಾಯಕ ವೆಚ್ಚ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯನ್ನು ಖರ್ಚು&ವೆಚ್ಚದ ಸೂಕ್ಷ$್ಮ ಕೇಂದ್ರ ಎಂದು ಪರಿಗಣಿಸಿದ್ದು, ಕಾನೂನು ಬಾಹೀರ ಖಚಿರ್ನ ಮೇಲೆ ನಿಗಾ ವಹಿಸಬೇಕು. ಪ್ರಜಾಪ್ರಾತಿನಿದ್ಯ ಕಾಯ್ದೆ ಸೆನ್ 77 ಹಾಗೂ ಸೆನ್ 10ಎ ಪ್ರಕಾರ ಅಭ್ಯಥಿರ್ಗೆ ನಿಗದಿಪಡಿಸಿದ 95 ಲ ರೂ. ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ರೆಕಾರ್ಡ್ಗಳನ್ನು ಹಾಗೂ ಸಾಗಳನ್ನು ಸರಿಯಾಗಿ ದಾಖಲಿಸಬೇಕು. ಖರ್ಚು ವೆಚ್ಚಗಳ ಬಗ್ಗೆ ದೂರು ಬಂದಾಗ ವೆಚ್ಚ ವೀಕ ತಂಡವು ತಣ ಕ್ರಮ ಕೈಗೊಳ್ಳಬೇಕು. ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳ ವೆಚ್ಚಗಳ ಕುರಿತು ಎಂಸಿಎಂಸಿ ತಂಡವು ನಿತ್ಯ ವೆಚ್ಚ ನಿಗಾ ನೋಡಲ್ ಅಧಿಕಾರಿಗಳಿಗೆ ವರದಿ ಒಪ್ಪಿಸಬೇಕು ಎಂದರು.
ನೋಡಲ್ ಅಧಿಕಾರಿಗಳಾದ ಮೋನಾ ರಾವತ, ಕ್ಕೀರೇಶ ಬಾದಾಮಿ, ಲೀಡ್ ಬ್ಯಾಂಕ್ ಅಧಿಕಾರಿ ಪ್ರಭುದೇವ, ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಪಿ.ಬಿ ಮಾತನಾಡಿದರು.