

ವಿಜಯಪುರ : ಸರ್ಕಾರಿ ಸೇವೆಯಿಂದ ನಿವೃತಿ ಹೊಂದಿದ್ದರೂ ಅವರು ಕೆಲಸದಲ್ಲಿದ್ದಾಗ ಮಾಡಿದ ಕಾರ್ಯಗಳು ಸದಾ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಸರ್ಕಾರಿ ಕೆಲಸ ದೇವರ ಎಂದು ಭಾವಿಸಿ ಆ ನಿಟ್ಟಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಭೀಮನಗೌಡ ಬಿರಾದಾರ (ಮಸಬಿನಾಳ) ಅವರು ನಮ್ಮ ಊರಿಗೆ ಗೌರವ ತರುವ ಹಾಗೇ ಕಾರ್ಯ ಮಾಡಿದ್ದಾರೆ ಎಂದು ಮಸಬಿನಾಳದ ವಿರಕ್ತಮಠದ ಸಿದ್ಧರಾಮಯ್ಯ ಸ್ವಾಮೀಜಿ ಹೇಳಿದರು.
ನಗರದ ಆಶ್ರಮ ರಸ್ತೆಯ ವೀರರಾಣಿ ಕಿತ್ತೂರ ಚನ್ನಮ್ಮ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಭೀಮನಗೌಡ ಬಿರಾದಾರ (ಮಸಬಿನಾಳ) ದಂಪತಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನ ಮತ್ತು ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಿಲೋಗಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ನಿವೃತ್ತಿಯ ನಂತರ ಬದುಕನ್ನು ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಆನಂದವಾಗಿ ಕಳೆಯಬೇಕು. ಅಲ್ಲದೆ, ಸಮಾಜ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕೆಂದು ಸಲಹೆ ನೀಡಿದರು.
ಕಿತ್ತೂರು ರಾಣಿ ಚನ್ನಮ್ಮ ಸಂಸ್ಥೆ ಅಧ್ಯ ಎಸ್.ಎಸ್. ಆಲೂರ, ಉಪಾಧ್ಯ ಬಿ.ಎಸ್. ಬಿರಾದಾರ, ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಪಾಟೀಲ ಮತ್ತು ಕೆಎಎಸ್ ಅಧಿಕಾರಿ ಎಸ್.ಎ. ಡಂಬಳ ವೇದಿಕೆಯಲ್ಲಿದ್ದರು.
ಎಸ್.ಎಸ್. ಮಾತಾಳೆ, ಎಂ.ಎಸ್. ದೇವನಾಳ, ಎಸ್.ಎ. ಡಂಬಳ, ಎನ್.ಎಸ್. ಬೈಚಬಾಳ, ಎಸ್.ಸಿ. ಸಾಸಟ್ಟಿ, ಎಸ್.ಎಂ. ಸಿಂದಗಿ, ಬಿ.ಎಸ್. ಬಿರಾದಾರ, ಎಸ್.ಜಿ. ಗಾಜರೆ ಮತ್ತಿತರರಿದ್ದರು.