

ಅರಕೇರಾ: ಪರಿಸರ ರಕ್ಷಿಸಿದರೆ ಸಕಲ ಜೀವರಾಶಿಗಳು ಸುಖವಾಗಿ ಬದುಕಲು ಸಾಧ್ಯ ಎಂದು ಎಸ್‌ಕೆಡಿಆರ್‌ಡಿಪಿ ಕೃಷಿ ಅಧಿಕಾರಿ ಹುಚ್ಚಪ್ಪ ಹೇಳಿದರು.
ಇದನ್ನೂ ಓದಿ:ವಿಶ್ವ ಜನಸಂಖ್ಯೆ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ
ಸಮೀಪದ ಚಿಕ್ಕಹೊನ್ನಕುಣಿ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಮಂಡಲದಲ್ಲಿ ವಾಸಮಾಡುವ ಜೀವಿಗಳ ಉಸಿರಾಟಕ್ಕೆ ಮುಖ್ಯವಾದ ಗಾಳಿ ಪರಿಸರದಿಂದ ಮಾತ್ರ ದೊರೆಯುತ್ತದೆ. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು. ಮುಖ್ಯಶಿಕ್ಷಕ ಕನಕಪ್ಪ ಮಾತನಾಡಿ, ಸಕಲ ಜೀವರಾಶಿಗಳು ಪರಿಸರವನ್ನೇ ಅವಲಂಬಿಸಿವೆ. ಆದ್ದರಿಂದ ಶಾಲೆ, ಮನೆ ಹಾಗೂ ಸುತ್ತಲೂ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದರು. ವಲಯ ಮೇಲ್ವಿಚಾರಕ ಮಂಜಯ್ಯ, ಶಿಕ್ಷಕರಾದ ಅಂಜಿನಯ್ಯ, ಶಕುಂತಲಾ, ರೂಪಾ, ರೆಡ್ಡಿಸಾಬ್, ಸೇವಾ ಪ್ರತಿನಿಧಿಗಳಾದ ಶ್ರೀದೇವಿ, ಮಾನಸಪ್ಪ, ಯುವರಾಜ ಇತರರಿದ್ದರು.