ನಿರಂತರ ಅಧ್ಯಯನ ಮಾಡಲಿ

10Ainapur1
Published on

ಐನಾಪುರ: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಸಾಧನೆ ಮಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಾಗವಾಡ ಪೊಲೀಸ್ ಠಾಣೆ ಪಿಎಸ್‌ಐ ರಾಘವೇಂದ್ರ ಖೋತ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನೆ ಮತ್ತು ಬಿ.ಎ., ಬಿ.ಕಾಂ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪಪಂ ಅಧ್ಯಕ್ಷೆ ಕಸ್ತೂರಿ ಮಡಿವಾಳ, ಪ್ರಾಚಾರ್ಯ ಎನ್.ಕೆ.ಮಾಂಗ ಮಾತನಾಡಿ, ಶಿಕ್ಷಣದೊಟ್ಟಿಗೆ ಸಂಸ್ಕಾರ ಕಲಿತುಕೊಳ್ಳಬೇಕು ಎಂದರು.

ಮುರಗೆಪ್ಪ ಮಹಾಜನ, ಸ್ವಾತಿ ಪಾಟೀಲ, ಪ್ರಕಾಶ ಕೋರ್ಬು, ಮಹೇಶ ಸೊಲ್ಲಾಪುರ, ಆರ್.ಬಿ.ಬಸನ್ನವರ, ಶಂಕರ ನಡೋಣಿ, ಸುದರ್ಶನ ಜೆಂತೆನ್ನವರ, ಅರವಿಂದ ಕಾರ್ಚಿ, ಮೆಹಬೂಬ್ ನನದಿ, ಪ್ರಕಾಶ ಸತ್ತಿ, ಉಪನ್ಯಾಸಕರಾದ ಶಾಂತಾ ಬಂಗಾರಿ, ಶ್ರುತಿ ಎಚ್., ಭಾಗ್ಯಶ್ರೀ ಎಂ.ಎಸ್., ಸೊಹಲ್ ಸತ್ತಿಕರ, ಕಪೀಲ ಕಾಂಬಳೆ, ಬಿ.ಎಸ್.ಮುಗನ್ನವರ, ಸಾಗರಿಕಾ ಎಂ.ಎನ್. ಇತರರಿದ್ದರು. ಸುಮತಿ ಕಾಂಬಳೆ, ನಜರಾನಾ ಮುಲ್ಲಾ ನಿರೂಪಿಸಿದರು. ಗಡ್ಕರಿ ಸ್ವಾಗತಿಸಿದರು. ಉಪನ್ಯಾಸಕ ಪರಶುರಾಮ ಹರಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net